ಆಡಂಕುದ್ರು: ಗಾಂಜಾ ಮಾರಾಟ; ಆರೋಪಿ ಬಂಧನ
Update: 2018-02-03 22:33 IST
ಮಂಗಳೂರು, ಫೆ. 3: ನಗರದ ಆಡಂಕುದ್ರು ನೇತ್ರಾವತಿ ಸೇತುವೆ ಬಳಿ ಬೈಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಇಕೊನಾಮಿಕ್ಸ್ ಎಂಡ್ ನಾರ್ಕೋಟಿಕ್ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಉಪ್ಪಳಗೇಟ್ ಶಾರದಾನಗರ ಮುಸೋಡಿಯ ಅರುಣ್ ಕುಮಾರ್ (21) ಎಂದು ಗುರುತಿಸಲಾಗಿದೆ. ಈತನಿಂದ 20 ಸಾವಿರ ರೂ. ಮೌಲ್ಯದ 1.100 ಕಿ.ಗ್ರಾಂ ಗಾಂಜಾ, 65 ಸಾವಿರ ರೂ. ಮೌಲ್ಯದ ಬೈಕ್, 1 ಸಾವಿರ ರೂ. ಮೌಲ್ಯದ ಮೊಬೈಲ್ ಸಹಿತ 86 ಸಾವಿರ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಇನ್ಸ್‌ಪೆಕ್ಟರ್ ಕೆ.ಎಂ.ಶರೀಫ್, ಪಿಎಸ್‌ಐ ಲತಾ ಕೆ.ಎನ್., ಸಿಬ್ಬಂದಿಗಳಾದ ಲಕ್ಷ್ಮೀಶ, ಶಾಜು ನಾಯರ್, ಕಿಶೋರ್ ಪೂಜಾರಿ, ಶ್ರೀಲತಾ, ಜಾಯ್ಸ್, ಭಾಸ್ಕರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.