×
Ad

ಪದ್ಮಾವತ್ ವಿರುದ್ಧದ ಪ್ರತಿಭಟನೆಯನ್ನು ನಾವು ಹಿಂಪಡೆದಿಲ್ಲ: ಕರ್ಣಿ ಸೇನೆ ಮುಖ್ಯಸ್ಥ

Update: 2018-02-03 22:38 IST

ಜೈಪುರ, ಫೆ.3: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ವಿರುದ್ಧದ ಪ್ರತಿಭಟನೆಯನ್ನು ಕರ್ಣಿಸೇನೆ ಹಿಂದೆಗೆದುಕೊಂಡಿದೆ ಎನ್ನುವ ಸುದ್ದಿಯನ್ನು ಕರ್ಣಿ ಸೇನೆಯ ಮುಖ್ಯಸ್ಥ ಲೋಕೇಂದ್ರ ಸಿಂಗ್ ನಿರಾಕರಿಸಿದ್ದಾರೆ.

ಇದು ನಕಲಿ ಕರ್ಣಿ ಸೇನೆ ಘೋಷಿಸಿದ ನಕಲಿ ಸುದ್ದಿಯಾಗಿದೆ ಎಂದವರು ಹೇಳಿದ್ದಾರೆ.

“ಭಾರತದಲ್ಲಿ ಹಲವು ಕರ್ಣಿ ಸೇನೆಗಳಿವೆ. ತಮ್ಮ ಸ್ವಹಿತಾಸಕ್ತಿಗಾಗಿ ದೇಶದಲ್ಲಿ ಇಂತಹ 8 ಗುಂಪುಗಳು ಕಾರ್ಯಾಚರಿಸುತ್ತಿವೆ. ರಜಪೂತರ ಭಾವನೆಗಳಿಗೆ ಬೆಲೆ ನೀಡದ್ದಕ್ಕಾಗಿ ರಾಜಸ್ಥಾನದಲ್ಲಿ ಬಿಜೆಪಿ ಬೆಲೆ ತರುವಂತೆಯೂ ಕರ್ಣಿ ಸೇನೆ ಮಾಡಿದೆ. ಭಾರತದಲ್ಲಿ ಒಂದೇ ಅಸಲಿ ಕರ್ಣಿ ಸೇನೆಯಿದೆ ಹಾಗು ನಾನು ಅದರ ಮುಖ್ಯಸ್ಥನಾಗಿರುವುದಕ್ಕೆ ಹೆಮ್ಮೆಯಿದೆ. ಇದೇ ಹೆಸರಿನಲ್ಲಿ ಕಾರ್ಯಾಚರಿಸುವ ನಕಲಿ ಕರ್ಣಿ ಸೇನೆಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News