ಎಂಪಿಎಲ್ 4ನೆ ಆವೃತ್ತಿಯ ತಂಡಗಳ ಘೋಷಣೆ
ಮಂಗಳೂರು, ಫೆ.3: ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಪಂದ್ಯಾಟದ 4ನೆ ಆವೃತ್ತಿಯ ತಂಡಗಳ ಘೋಷಣೆಯನ್ನು ಶನಿವಾರ ನಗರದ ಹೋಟೆಲ್ ಗೋಲ್ಡ್‌ಪಿಂಚ್‌ನಲ್ಲಿ ನೆರವೇರಿತು.
ಕನ್ನಡ ಚಿತ್ರನಟಿ ಭಾವನಾ 4ನೆ ಆವೃತ್ತಿಯ ತಂಡಗಳನ್ನು ಘೋಷಿಸಿದರು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್, ಬ್ರಾಂಡ್ ವಿಷನ್ ಸಂಸ್ಥೆಯ ಸಿರಾಜುದ್ದೀನ್, ಇಮ್ತಿಯಾಝ್, ಸಿ ಬರ್ಡ್ ಕ್ರಿಕೆಟ್ ಸಂಸ್ಥೆಯ ಶಶಿಧರ್ ಕೋಡಿಕಲ್, ಬಾಲಕೃಷ್ಣ ಪರ್ಕಳ, ಶುಐಬ್, ನಿಹಾಲ್ ಮೊದಲಾದವರು ಉಪಸ್ಥಿತರಿದ್ದರು.
ಈ ಪಂದ್ಯಾಟವು ಮಾರ್ಚ್ 20ರಿಂದ ಎಪ್ರಿಲ್ 1ರ ವರೆಗೆ ಪಣಂಬೂರಿನ ಡಾ. ಬಿ.ಆರ್.ಅಂಬೇಡ್ಕರ್ ಕ್ರಿಕೆಟ್ ಕ್ರೀಡಾಂಗಣದ ಅಸ್ಟ್ರೋಟರ್ ಪಿಚ್‌ನಲ್ಲಿ ನಡೆಯಲಿದೆ.
ಪಂದ್ಯಾಟದಲ್ಲಿ ಕೋಸ್ಟಲ್ ಡೈಜೆಸ್ಟ್, ಕಾರ್ಕಳ ಗ್ಲೇಡಿಯೇಟರ್ಸ್, ಬೆದ್ರ ಬುಲ್ಸ್ ಮೂಡಬಿದಿರೆ, ಎ.ಕೆ.ಸ್ಪೋರ್ಟ್ಸ್ ಉಡುಪಿ, ವೈಸ್ ವಾರಿಯರ್ಸ್ ಸೂರಲ್ಪಾಡಿ, ಮಂಗಳೂರು ಯುನೈಟೆಡ್, ಯುನೈಟೆಡ್ ಉಳ್ಳಾಲ, ಕ್ಲಾಸಿಕ್ ಬಂಟ್ವಾಳ್, ಅಲಿ ವಾರಿಯರ್ಸ್, ಟಿ4 ಸೂಪರ್‌ಕಿಂಗ್ಸ್ ಹಾಗೂ ಮ್ಯಾಸ್ಟ್ರೋಟೈಟಾನ್ಸ್ ತಂಡಗಳು ಭಾಗವಹಿಸಲಿವೆ.
ಈ ಸಂದರ್ಭದಲ್ಲಿ ಎಲ್ಲಾ ತಂಡಗಳ ಮಾಲಕರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.