ಬಂಟ್ವಾಳ: ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ
Update: 2018-02-04 17:16 IST
ಬಂಟ್ವಾಳ, ಫೆ.4: ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳ ಹಾಗೂ ತುರ್ತುಸೇವೆಯ ಮುಂಜಾಗ್ರತಾ ಕಾರ್ಯಕ್ರಮ ಹಾಗೂ ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ ನಡೆಯಿತು.
ಬಂಟ್ವಾಳ ಘಟಕದ ಅಗ್ನಿಶಾಮಕ ಠಾಣಾಧಿಕಾರಿ ರಾಜೀವ್, ಪ್ರಮುಖ ಆಗ್ನಿಶಾಮಕರಾದ ಮೀರ್ ಮುಹಮ್ಮದ್ ಗೌಸ್ ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆಯ ನೇತೃತ್ವ ವಹಿಸಿದ್ದರು.
ಶಾಲಾ ಸಂಚಾಲಕ ಬಿ.ಮುಹಮ್ಮದ್ ಅಲಿ, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಮೆಟಿಲ್ಡಾ ಡಿಕೋಸ್ತ ಹಾಗೂ ಕೆಜಿ ವಿಭಾಗದ ಮುಖ್ಯಸ್ಥೆ ಮಮತಾ ಸುವರ್ಣ ಉಪಸ್ಥಿತರಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ಮೀರ್ ಮುಹಮ್ಮದ್ ಗೌಸ್ ಆಕಸ್ಮಿಕ ಬೆಂಕಿ ಅವಘಡ ಮತ್ತು ಅಡುಗೆ ಅನಿಲದ ಮಾರಕ ಮತ್ತು ಪೂರಕದ ಬಗ್ಗೆ ಅರಿವು ಮೂಡಿಸಿದರು.
ವಿವಿಧ ರೀತಿಯ ಬೆಂಕಿ ಅವಘಡಗಳು ಸಂವಿಸಿದಾಗ ಅದನ್ನು ಹೇಗೆ ನಂದಿಸಬಹುದು ಹಾಗೂ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿಕೊಟ್ಟರು.