ವಿಟ್ಲ : ಮೌಲಾನಾ ಹಲ್ಕಾ ದ್ಸಿಕ್ರ್ ಸಮ್ಮೇಳನ, ರಾಜ್ಯ ಮಟ್ಟದ ದಫ್ ಸ್ಪರ್ಧೆ

Update: 2018-02-04 11:47 GMT

ವಿಟ್ಲ, ಫೆ. 4: ಕಬಕ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ನೇತ್ರತ್ವದಲ್ಲಿ 18ನೆ ವರ್ಷದ ಮೌಲಾನಾ ಹಲ್ಕಾ ದ್ಸಿಕ್ರ್ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ ಇಲ್ಲಿನ ಮೌಲಾನಾ ಕಾಟೇಜ್‌ನಲ್ಲಿ ನಡೆಯಿತು.

ಪುತ್ತೂರು ತಂಙಳ್ ಮಖಾಂ ಕೂಟು ಝಿಯಾರತ್‌ನೊಂದಿಗೆ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಶರಫುದ್ದೀನ್ ಮೌಲಾನಾ ಶ್ರೀಲಂಕಾ, ಸೈದಲವಿ ತಂಙಳ್ ಮಾಸ್ತಿಕುಂಡ್-ಓಲೆಮುಂಡೋವು ದುವಾ ನೆರವೇರಿಸಿದರು. 

ಅಬ್ದುಲ್ಲ ಫೈಝಿ ಚೆಂಗಳ ಕಸಬ ಉದ್ಘಾಟಿಸಿದರು. ಮೌಲಾನಾ ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಕುರ್‌ಆನ್ ಪಂಡಿತ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಮುಖ್ಯ ಭಾಷಣಗೈದರು. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಲ್ಕಾ ದಿಕ್ರ್ ನೇತೃತ್ವ ವಹಿಸಿದ್ದರು.

ಸೈಯದ್ ಯಹ್ಯಾ ತಂಙಳ್ ಪೋಳ್ಯ, ಸೈಯದ್ ಮುಹಮ್ಮದ್ ತಂಙಳ್ ಕಬಕ, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಖತೀಬ್ ಆಸಿಫ್ ಅರ್ಹರಿ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ಚೇಳಾರಿ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಕೆ.ಕೆ. ಮಾಣಿಯೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಪುರಸಭಾ ಸದಸ್ಯ ಮುಹಮ್ಮದ್ ಅಲಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಪರ್ಲೊಟ್ಟು ಮಸೀದಿ ಅಧ್ಯಕ್ಷ ಕೆ.ಬಿ. ಕಾಸಿಂ ಹಾಜಿ ಮಿತ್ತೂರು, ಹಿದಾಯ ಫೌಂಡೇಶನ್‌ನ ಎಫ್.ಎಂ. ಬಶೀರ್ ಫರಂಗಿಪೇಟೆ, ಮುಸ್ತಫಾ ಮೇಲ್ಮನೆ, ಇಸ್ಮಾಯಿಲ್ ಪಾವೂರು, ಸಿದ್ದೀಕ್ ಮಲ್ಲಿ, ಬಿ.ಎನ್. ಮುಹಮ್ಮದ್ ಮದನಿ ಕಬಕ, ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು, ಮೂಸಲ್ ಫೈಝಿ ಪಾಟ್ರಕೋಡಿ, ಉಮರ್ ದಾರಿಮಿ ಸಾಲ್ಮರ, ಶರೀಫ್ ಅರ್ಶದಿ ಮುಕ್ವೆ, ಶೇಖ್ ಮುಹಮ್ಮದ್ ಇರ್ಫಾನಿ ಮಾರಿಪಳ್ಳ, ಹನೀಫ್ ದಾರಿಮಿ ಬಪ್ಪಳಿಗೆ, ಮಾಹಿನ್ ದಾರಿಮಿ ಪಾತೂರು, ಆದಂ ದಾರಿಮಿ ಕೊಡಾಜೆ, ಉಮರ್ ಫೈಝಿ ಸಾಲ್ಮರ, ಮುಹಮ್ಮದಾಲಿ ದಾರಿಮಿ ಪರ್ಲಡ್ಕ, ಅಬ್ದುಲ್ ಹಮೀದ್ ಫೈಝಿ ಕಕ್ಕಿಂಜೆ, ಅಬ್ದುಲ್ ಮಜೀದ್ ಫೈಝಿ ನಂದಾವರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಲಾಹುದ್ದೀನ್, ನಿಝಾಮುದ್ದೀನ್, ಲತೀಫ್ ಕಬಕ, ಆಸಿಫ್ ಕೆ.ಎಸ್., ಅಹ್ಮದ್ ಬೊಳ್ಳಾಯಿ, ಮುನಾರ್ ಕೊಳಕೆ, ನಿಝಾಮ್ ಕಬಕ, ನಝೀಂ ಕಬಕ, ಸಿನಾನ್ ಕಬಕ, ಅಫ್ಲಲ್ ಕಬಕ, ಅನೀಸ್ ಕಬಕ, ತೌಸೀಫ್ ಕಬಕ, ಶೌಕತ್ ಕಬಕ, ಶರೀಫ್ ಕಬಕ, ಸಲೀಂ ಕಬಕ, ನಸೀರ್ ಕಬಕ, ಅಬೂಬಕ್ಕರ್, ಬಾತಿಶ್ ಕಬಕ ಮೊದಲಾದವರು ಉಪಸ್ಥಿತರಿದ್ದರು.

ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು. ಸಿದ್ದೀಕ್ ಬೀಟಿಗೆ ಸ್ವಾಗತಿಸಿ, ಕಮಾಲ್ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ಕೈಕಂಬ ತಂಡಕ್ಕೆ ದಫ್ ಪ್ರಶಸ್ತಿ

ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಬಿ.ಸಿ.ರೋಡು-ಕೈಕಂಬದ ರಿಫಾಯಿಯ ದಫ್ ತಂಡ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿತು. ಅಡ್ಯಾರ್-ಕಣ್ಣೂರು, ಬೀಡುವಿನ ಅಹ್ಮದ್ ಕಬೀರ್ ರಿಫಾಯಿ ದಫ್ ತಂಡ ದ್ವಿತೀಯ ಹಾಗೂ ಕೂಳೂರು-ಪಂಜಿಮೊಗರು ರಿಫಾಯಿಯಾ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News