×
Ad

ದಲಿತ ಪ್ರತಿಭಟನಾಕಾರರ ಬಂಧನ: ವಡಂಬಾಡಿಯಲ್ಲಿ ಉದ್ವಿಗ್ನ ಸ್ಥಿತಿ

Update: 2018-02-04 17:27 IST

ಕೊಲಂಚೇರಿ,ಫೆ.4: ಕೇರಳದ ವಡಂಬಾಡಿಯಲ್ಲಿ ಭಜನಾ ಮಂದಿರದ ಭೂವಿವಾದಕ್ಕೆ ಸಂಬಂಧಿಸಿ ದಲಿತ ಭೂಹೋರಾಟ ಸಮಿತಿ ಆಯೋಜಿಸಿದ ದಲಿತಸ್ವಾಭಿಮಾನಿ ಸಂಗಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸಂಗಮಕ್ಕೆ ಬಂದ ದಲಿತ ಕಾರ್ಯಕರ್ತರು ಮತ್ತು ವಿರೋಧ ವ್ಯಕ್ತಪಡಿಸಿದ್ದ ಸಂಘಪರಿವಾರ ಕಾರ್ಯಕರ್ತರು ಚೂಂಡಿ ಜಂಕ್ಷನ್‍ನಲ್ಲಿ ಎದುರಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು.  ಸಂಗಮದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಕಡೆಯಿಂದ ಕಾರ್ಯಕರ್ತರು ಎರ್ನಾಕುಳಂಗೆ ಬಂದು ಸೇರಿದ್ದರು. ಪ್ರದೇಶದಲ್ಲಿ ದಲಿತ ಸಂಘಟನೆಯ 300 ಕಾರ್ಯಕರ್ತರು,40ರಷ್ಟು ಸಂಘಪರಿವಾರ ಕಾರ್ಯಕರ್ತರು ಗುಂಪುಗೂಡಿದ್ದರು. ಸಂಗಮ ನಡೆಸಲು ಅನುಮತಿ ಪಡೆದಿಲ್ಲ ಎಂದು ಪೊಲೀಸರು ದಲಿತ ಹೋರಾಟಗಾರರನ್ನು ಬಂಧಿಸಿದ್ದಾರೆ.

ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸದೆ ಹೋರಾಟ ಸಮಿತಿ ಕಾರ್ಯಕರ್ತರನ್ನು ಮಾತ್ರ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆಪ್ರತಿಭಟನೆಯ ವರದಿಗೆ ತೆರಳಿದ ಪತ್ರಕರ್ತರಿಗೆ ಆರೆಸ್ಸೆಸ್ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News