×
Ad

'ಕೋರೆಗಾಂವ್ ಗಲಭೆ' ಆರೋಪಿಗೂ ಹಿಂದೂ ಜನ ಜಾಗೃತಿಗೂ ಸಂಬಂಧವಿಲ್ಲ

Update: 2018-02-04 21:38 IST

ಮಂಗಳೂರು, ಫೆ. 4: ಕೋರೆಗಾಂವ್ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮಿಲಿಂದ್ ಎಕಬೊಟೆಗೂ ಹಿಂದೂ ಜನ ಜಾಗೃತಿ ಸಂಘಟನೆಗೂ ಯಾವ ಸಂಬಂಧವೂ ಇಲ್ಲ ಎಂದು ಸಮಿತಿಯ ಪ್ರಕಟನೆ ಸ್ಪಷ್ಟಪಡಿಸಿದೆ.

ಅವರು ‘ಸಮಸ್ತ ಹಿಂದೂ ಆಘಾಡಿ’ಯ ಕಾರ್ಯಾಧ್ಯಕ್ಷನಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯಲ್ಲಿ ಅಧ್ಯಕ್ಷ ಅಥವಾ ತತ್ಸಮ ಹುದ್ದೆಗಳು ಅಸ್ತಿತ್ವದಲ್ಲಿಲ್ಲ ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಿಲಿಂದ್ ಎಕಬೊಟೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇತ್ತೀಚೆಗೆ ಮುಂಬೈ ಹೈಕೋರ್ಟ್ ವಜಾಗೊಳಿಸಿತ್ತು. ಈ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಇವರು ಹಿಂದೂ ಜನ ಜಾಗೃತಿಯ ಮುಖಂಡ ಎಂದು ಪ್ರಕಟವಾಗಿತ್ತು. ‘ಸಮಸ್ತ ಹಿಂದೂ ಆಘಾಡಿ’ಯ ಕಾರ್ಯಾಧ್ಯಕ್ಷ ಮಿಲಿಂದ್ ಎಕಬೊಟೆ ಕಳೆದ ಹಲವು ವರ್ಷಗಳಿಂದ ಧರ್ಮಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಕೋರೆಗಾಂವ್ ಭೀಮಾ ಗಲಭೆ ಪ್ರಕರಣದಲ್ಲಿ ಅವರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಈ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರವನ್ನು ರಚಿಸಲಾಗಿದೆ. ಈ ವರದಿಯಿಂದಾಗಿ ಸಮಾಜದಲ್ಲಿ ಕೋರೆಗಾಂವ್ ಭೀಮಾ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ತೇಜೋವಧೆಯಾಗುವ ಸಾಧ್ಯತೆ ಇದೆ. ಸಮಸ್ತ ಹಿಂದೂ ಆಘಾಡಿ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಸಮಾನ ವಿಚಾರದಿಂದ ಹಿಂದೂ ಹಿತಕ್ಕಾಗಿ ಅನೇಕ ಉಪಕ್ರಮಗಳನ್ನು ಒಟ್ಟಾಗಿ ವ್ಯಾಪಕವಾಗಿ ಮಾಡುತ್ತಿದೆ. ಸಮಸ್ತ ಹಿಂದೂ ಆಘಾಡಿ ಮತ್ತು ಎಕಬೊಟೆ ಇವರ ಕಾರ್ಯದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಗೆ ಸದಾ ಗೌರವವಿದೆ. ಆದರೆ ಇವೆರಡೂ ಸಂಘಟನೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೋರೆಗಾಂವ್ ಭೀಮಾ ಪ್ರಕರಣದಲ್ಲಿ ತೇಜೋವಧೆ ಮಾಡುವ ಷಡ್ಯಂತ್ರ ಜಾತ್ಯಂಧರಿಂದ ಆಗುತ್ತಿದೆ ಮೋಹನ ಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News