ಟ್ರಂಪ್ ಆಡಳಿತದಲ್ಲಿ ಮುಸ್ಲಿಮರು, ಹಿಂದೂಗಳ ವಿರುದ್ಧ ದ್ವೇಷದ ದಾಳಿಗಳಲ್ಲಿ ಹೆಚ್ಚಳ

Update: 2018-02-04 16:52 GMT

ವಾಶಿಂಗ್ಟನ್,ಫೆ.4: ಡೊನಾಲ್ಡ್ ಅಧಿಕಾರಕ್ಕೇರಿದ ಬಳಿಕ ಅಮೆರಿಕದಲ್ಲಿ ಹಿಂದೂ, ಮುಸ್ಲಿಂ, ಸಿಖ್ಖ್, ದಕ್ಷಿಣಏಶ್ಯ ಸಂಜಾತರು ಹಾಗೂ ಅರಬ್ ಜನಾಂಗೀಯರ ಮೇಲಿನ ದಾಳಿಗಳಲ್ಲಿ ಏರಿಕೆಯಾಗಿದೆಯೆಂದು ವರದಿಯೊಂದು ತಿಳಿಸಿದೆ.

ನವೆಂಬರ್ 9 , 2016 ಹಾಗೂ ನವೆಂಬರ್7, 2017ರ ನಡುವೆ ಈ ಸಮುದಾಯಗಳ ವಿರುದ್ಧ ದ್ವೇಷಪೂರಿತವಾದ ಹಿಂಸಾಚಾರ ಹಾಗೂ ಜನಾಂಗೀಯ ದ್ವೇಷದ ನಿಂದನೆಯ ಒಟ್ಟು 302 ಪ್ರಕರಣಗಳು ದಾಖಲಾಗಿರುವುದಾಗಿ 'ಸೌತ್ ಏಶ್ಯನ್ ಅಮೆರಿಕನ್ಸ್ ಲಿವಿಂಗ್ ಟುಗೆದರ್ (ಸಾಲ್ಟ್)' ನ ವರದಿಯು ತಿಳಿಸಿದೆ.

 ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಕೇವಲ ಒಂದೇ ವರ್ಷದಲ್ಲಿ ಈ ಹಿಂದಿನ ಸಮೀಕ್ಷೆಗಿಂತ ಶೇ.45ರಷ್ಟು ಏರಿಕೆಯಾಗಿದೆ ಎಂದು ಸಾಲ್ಟ್ ವರದಿ ಹೇಳಿದೆ. 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ಆನಂತರ, ಯಾವತ್ತೂ ಇಷ್ಟೊಂದು ಪ್ರಮಾಣದಲ್ಲಿ ಇಂತಹ ಪ್ರಕರಣಗಳು ವರದಿಯಾಗಿರಲಿಲ್ಲವೆಂದು ವರದಿಯು ಹೇಳಿದೆ.

 2016ರ ನವೆಂಬರ್ 9 ಹಾಗೂ 2017ರ ನವೆಂಬರ್ 7ರ ನಡುವೆ ದ್ವೇಷಪೂರಿತ ಹಿಂಸೆಯ 213 ಘಟನೆಗಳು ಹಾಗೂ ಜನಾಂಗೀಯ ವಿರೋಧಿ ನಿಂದನೆಗಳ 89 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶೇ.82 ಪ್ರಕರಣಗಳು ಮುಸ್ಲಿಂ ವಿರೋಧಿ ಭಾವನೆಯಿಂದ ಕೂಡಿದ್ದಾಗಿದ್ದವು ಎಂದು ವರದಿಯು ತಿಳಿಸಿದೆ.

  ದಾಖಲಾಗಿರುವ 213 ಘಟನೆಗಳಲ್ಲಿ ಶಾಮೀಲಾಗಿರುವ ಪ್ರತಿ ಐವರು ಆರೋಪಿಗಳಲ್ಲಿ ಒಬ್ಬಾತ ಟ್ರಂಪ್ ಅವರ ಆಡಳಿತದ ನೀತಿಗಳಿಂದ ಹಾಗೂ ಅವರ ಚುನಾವಣಾ ಪ್ರಚಾರದ ಘೋಷಣೆಗಳಿಂದ ಪ್ರಭಾವಿತನಾಗಿದ್ದ ಎಂದು ವರದಿ ಹೇಳಿದೆ.

ಶೇ.63ರಷ್ಟು ದ್ವೇಷಪೂರಿತ ದಾಳಿಗಳು ಮಹಿಳೆಯರನ್ನು ಗುರಿಯಿರಿಸಿ ನಡೆಸಲಾಗಿದ್ದು, ಹಿಜಾಬ್ ಅಥವಾ ಶಿರವಸ್ತ್ರಗಳನ್ನು ಧರಿಸಿದ ಮಹಿಳೆಯರು ಕೂಡಾ ಜನಾಂಗೀಯವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆಂದು ವರದಿಯು ತಿಳಿಸಿದೆ.

 ಬಿಳಿ ಜನಾಂಗೀಯ ಶ್ರೇಷ್ಠತಾವಾದಿಗಳ ಬೆಳವಣಿಗೆ ಹಾಗೂ ಸಮುದಾಯಗಳ ಮೇಲೆ ಹೆಚ್ಚುತ್ತಿರುವ ದಾಳಿಗಳು, ಈ ಆಡಳಿತದ ಮುಸ್ಲಿಂ ವಿರೋಧಿ ಕಾರ್ಯಸೂಚಿಯು ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿ ಮಾಡುವುದಿಲ್ಲ, ಬದಲಿಗೆ ಇದು ಅಮೆರಿಕನ್ನರನ್ನು ಭಯಗ್ರಸ್ತರನ್ನಾಗಿ ಮಾಡಿದೆ’’ಎಂಬುದಕ್ಕೆ ಸಮರ್ಥ ಪುರಾವೆಯಾಗಿದೆ.

ಸುಮನ್ ರಘುನಾಥನ್

ಸಾಲ್ಟ್ ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News