ಅಫ್ಘಾನ್‌ನಿಂದ ವಾಯುದಾಳಿ: 8 ತಾಲಿಬಾನ್ ಬಂಡುಕೋರರ ಹತ್ಯೆ
Update: 2018-02-04 22:30 IST
ಕಾಬುಲ್,ಫೆ.4: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ಭದ್ರಕೋಟೆಯಾದ ಬಡಕ್‌ಶಾನ್ ಪ್ರಾಂತದಲ್ಲಿ ಅಫ್ಘಾನ್ ವಾಯುಪಡೆಯ ಯುದ್ಧ ವಿಮಾನಗಳ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಫ್ಘಾನ್‌ನ ಯುದ್ಧ ವಿಮಾನಗಳು ತಾಲಿಬಾನ್‌ನ ಪ್ರಮುಖ ಭದ್ರಕೋಟೆಯಾದ ವಾರ್ದೊಜ್ ಜಿಲ್ಲೆಯ ಚಾಕರನ್ ಪ್ರದೇಶದಲ್ಲಿ ವಾಯುದಾಳಿ ನಡೆಸಿ, ಕನಿಷ್ಠ ಎಂಟು ಮಂದಿ ಬಂಡುಕೋರರನ್ನು ಹತ್ಯೆಗೈದಿವೆ ಹಾಗೂ ಗುಂಪಿನ ಎರಡು ವಾಹನಗಳನ್ನು ನಾಶಪಡಿಸಿದೆಯೆಂದು, ಅಫ್ಘಾನ್ ಅಧಿಕಾರಿಯೊಬ್ಬರು ಕ್ಸಿನುವಾ ಸುದ್ದಿಸಂಸ್ಥೆಗೆ ಇಳಿಸಿದ್ದಾರೆ.
ವಾರ್ದೊಜ್ ಜಿಲ್ಲೆಯು ಎರಡೂವರೆ ವರ್ಷಗಳ ಹಿಂದೆ ತಾಲಿಬಾನ್ ಬಂಡುಕೋರರ ವಶವಾಗಿತ್ತು. ಆ ಬಳಿಕ ಈ ಜಿಲ್ಲೆಯು ಬಡಕ್‌ಶಾನ್ ಹಾಗೂ ನೆರೆಹೊರೆಯ ತಾಖರ್ ಹಾಗೂ ನುರಿಸ್ತಾನ್ ಪ್ರಾಂತಗಳಿಗೆ ತಾಲಿಬಾನ್‌ನ ಮುಖ್ಯನೆಲೆಯೆಂದು ಪರಿಗಣಿಸಲ್ಪಟ್ಟಿತ್ತು.