×
Ad

ಮಟ್ಕಾ ಜುಗಾರಿ: ಇಬ್ಬರ ಬಂಧನ

Update: 2018-02-04 22:30 IST

ಕುಂದಾಪುರ, ಫೆ.4: ವಡೇರಹೋಬಳಿ ಗ್ರಾಮದ ಶಾಸ್ತ್ರೀ ಪಾರ್ಕ್‌ನ ಬಳಿ ಫೆ. 4ರಂದು ಬೆಳಗ್ಗೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವಿಠಲವಾಡಿಯ ಸಂದೇಶ ಶೆಟ್ಟಿ (29) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ, 2056 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಮಣಿಪಾಲದ ಬಸ್ ನಿಲ್ದಾಣದ ಬಳಿ ಫೆ.3ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಪ್ಪೂರು ಮದಗ ನಿವಾಸಿ ಅಂತೋನಿ ಡಿಸೋಜ ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿ, 2,095 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News