ಯಾವ ಕಾಲಕ್ಕೂ ಸಂಸ್ಕೃತದ ಮಹತ್ವ ಕ್ಷೀಣಿಸಲ್ಲ: ಪಲಿಮಾರು ಸ್ವಾಮೀಜಿ
ಉಡುಪಿ, ಫೆ.5: ಸಂಸ್ಕೃತದ ಮಹತ್ವ ಯಾವ ಕಾಲಕ್ಕೂ ಕಡಿಮೆಯಾಗುವು ದಿಲ್ಲ. ಸಂಸ್ಕೃತ ಅಧ್ಯಯನಕಾರರು ಕೆಲವೇ ಸಂಖ್ಯೆಯಲ್ಲಿದ್ದರೂ ಯಾವುದೇ ತೊಂದರೆ ಇಲ್ಲ. ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವಂತೆ ಜನರು ಅತೀ ಪ್ರಾಚೀನ ಅಮೂಲ್ಯ ಸಂಪತ್ತು ಸಂಸ್ಕೃತವನ್ನು ತಮ್ಮ ಮನೆ-ಮನಗಳಲ್ಲಿ ತುಂಬಿಸಿ ಕೊಳ್ಳಬೇಕು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಶ್ರೀರಾಮ ಕೃಷ್ಣ ಶಾರದಾ ಆಶ್ರಮ ಬೈಲೂರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾ ರಂಭಲ್ಲಿ ಅವರು ಆಶೀರ್ವಚನ ನೀಡಿದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಜ್ಞಾನಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಪಡೆಯಬೇಕಾದರೆ ಸಂಸ್ಕೃತ ಅಧ್ಯಯನ ಅಗತ್ಯ. ಸಂಸ್ಕೃತದ ಉಳಿವಿಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತ ದಲ್ಲೇ ಭಾಷಾ ಬೋಧನೆ ಕಡ್ಡಾಯವಾಗಬೇಕು ಎಂದು ಹೇಳಿದರು.
ಉಡುಪಿ ನಗರಸಭಾ ಪೌರಾಯುಕ್ತ ಡಿ.ಮಂಜುನಾಥಯ್ಯ ಮಾತನಾಡಿ, ಭಾಷೆಯ ಉಳಿವು ಜನರ ಕೈಯಲ್ಲಿದೆ. ಮಡಿವಂತಿಕೆ ಬಿಟ್ಟು ಬೇರೆ ಭಾಷೆಗೆ ಸಮಾನಾಂತರವಾಗಿ ಸಂಸ್ಕೃತವನ್ನು ಬೆಳೆಸುವ ಕೆಲಸ ಮಾಬೇದು ಎಂದು ಅಭಿ ಪ್ರಾಯ ಪಟ್ಟರು. ಸಂಸ್ಕಾರ ಭಾರತಿಯ ಸುಮತಾ ನಾಯಕ್, ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.