ವಿಧಾನಸೌಧದಲ್ಲಿ ಕಾರ್ಮಿಕರ ಧ್ವನಿಯಾಗಲು ಅವಕಾಶ ನೀಡಿ: ಮಲ್ಲಿ
ಕುಂದಾಪುರ, ಫೆ.5: ಕೃಷಿಕ ಕುಟುಂಬದಿಂದ ಬಂದ ತನಗೆ ಕೃಷಿಕರ ಸಮಸ್ಯೆ ಕುರಿತು ಆಳವಾದ ಅರಿವಿದೆ. ಅಲ್ಲದೇ ಇಂಟೆಕ್ ಸಂಘಟನೆಯ ರಾಜ್ಯ ಅಧ್ಯಕ್ಷನಾಗಿ ಕಾರ್ಮಿಕರ ಸಮಸ್ಯೆಗಳ ಕುರಿತು ಕೂಡ ಸಮಗ್ರವಾದ ಮಾಹಿತಿ ಇದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಕಾರ್ಮಿಕರಿದ್ದು, ಈ ಭಾಗದ ಕಾರ್ಮಿಕರ ಸಮಸ್ಯೆಯ ಕುರಿತು ವಿಧಾನಸೌಧದಲ್ಲಿ ಧ್ವನಿ ಎತ್ತಲು, ಹೋರಾಡಲು ತನಗೆ ಅವಕಾಶ ನೀಡುವಂತೆ ಇಂಟಕ್ ರಾಜ್ಯಾಧ್ಯಕ್ಷ ರಾಕೇಸ್ ಮಲ್ಲಿ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಕೋಣಿಯ ಆಶೀರ್ವಾದ್ ಹಾಲ್‌ನಲ್ಲಿ ರವಿವಾರ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಭಾವಾ, ಮಮತಾ ಗಟ್ಟಿ, ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಐಟಿ ಸೆಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಕಿಶೋರ್ ಶೆಟ್ಟಿ, ಹಿರಿಯ ಕಾಂಗ್ರೆಸಿಗ ಕೃಷ್ಣ ದೇವ ಕಾರಂತ, ಶಿವಾನಂದ ಕೆ, ಜಿಪಂ ಮಾಜಿ ಸದಸ್ಯ ದೇವಾನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಂಚಾಲಕಿ ರೋಶನಿ ಒಲಿವೇರಾ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ ರವಿಕಲಾ ಗಣೇಶ್, ಪ್ರಭಾಕರ ಕೋಡಿ, ದೇವಕಿ ಸಣ್ಣಯ್ಯ, ಶಿವರಾಮ ಪುತ್ರನ್ ಕಾವ್ರಾಡಿ, ಜಿಪಂ ಸದಸ್ಯೆ ಜ್ಯೋತಿ ಎಂ, ತಾಪಂ ಸದಸ್ಯೆ ಅಂಬಿಕಾ, ಸುಜಾತ ಸುವರ್ಣ, ಜಿಪಂ ಮಾಜಿ ಉಪಾಧ್ಯಕ್ಷೆ ಸುಜಾತ ವಾಸುದೇವ, ಹೆಂಗವಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.