ಪುದು ಗ್ರಾಪಂ ಚುನಾವಣೆ: ಮೂರು ನಾಮಪತ್ರ ಸಲ್ಲಿಕೆ
Update: 2018-02-06 18:46 IST
ಫರಂಗಿಪೇಟೆ, ಫೆ. 6: ಪುದು ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಮಂಗಳವಾರ ಮೂರು ನಾಮಪತ್ರ ಸಲ್ಲಿಕೆಯಾಗಿವೆ.
ಪುದುವಿನ 7ನೆ ವಾರ್ಡ್‌ಗೆ ಉಮೇದುವಾರನಾಗಿ ನಝೀರ್, ದುರ್ಗೇಶ್ ಬಿ. ಶೆಟ್ಟಿ, ಮುಹಮ್ಮದ್ ಹನೀಫ್ ನಾಮಪತ್ರ ಸಲ್ಲಿಸಿದ್ದಾರೆ.
ಫೆ. 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಫೆ. 8ಕ್ಕೆ ನಾಮಪತ್ರ ಪರಿಶೀಲನೆ, ಫೆ. 12ಕ್ಕೆ ಹಿಂದೆಗೆಯುವಿಕೆ, ಫೆ. 18ಕ್ಕೆ ಚುನಾವಣೆ, ಫೆ. 20 ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.