ಬ್ಯಾಂಡ್ ಮಾಸ್ಟರ್ ಫ್ರಾನ್ಸಿಸ್ ಡಿಸೋಜಗೆ ಸನ್ಮಾನ
Update: 2018-02-06 20:14 IST
ಉಡುಪಿ, ಫೆ. 6: ಉಡುಪಿಯ ಲಯನ್ಸ್ ಕ್ಲಬ್ ಉಡುಪಿ ಕರಾವಳಿ(317ಸಿ) ವತಿಯಿಂದ ಉಡುಪಿಯ ಟೌನ್ ಹಾಲ್‌ನಲ್ಲಿ ಇತ್ತೀಚೆಗೆ ಜರಗಿದ ಜಿಲ್ಲಾ ಗವರ್ನರ್ ಎ.ಆರ್.ಉಜ್ಜನಪ್ಪಅಧಿಕೃತ ಭೇಟಿಯ ಸಮಾರಂಭದಲ್ಲಿ ಪೆರಂಪಳ್ಳಿ ಯ ಬ್ಯಾಂಡ್ ಮಾಸ್ಟರ್ ಫಾನ್ಸಿಸ್ ಡಿಸೋಜರನ್ನು ಸನ್ಮಾನಿಸಲಾಯಿತು.
ಉಜ್ಜನಪ್ಪರ ಪತ್ನಿ ನಾಗಮ್ಮ ವರದಿ ವಾಚನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ದರು. ಈ ಸಂದರ್ಭದಲ್ಲಿ ದೃಷ್ಟಿದೋಷದಿಂದ ಬಳಲುತ್ತಿರುವ ದಿನೇಶ್ ಪೂಜಾರಿ ಮಟಪಾಡಿಗೆ ಮತ್ತು ಉಡುಪಿ ಸವಿತಾ ಸಮಾಜದ ಕಟ್ಟಡಕ್ಕೆ ಧನ ಸಹಾಯವನ್ನು ಅ್ಯಕ್ಷ ಹರೀಶ್ ಪೂಜಾರಿ ವಿತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಪೂಜಾರಿ, ಜಿಲ್ಲಾ ಉಪ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ವಿಭಾಗೀಯ ಅಧ್ಯಕ್ಷೆ ಜ್ಯೋತಿ ಪೈ, ಕ್ಯಾಬಿನೆಟ್ ಕಾರ್ಯದರ್ಶಿ ರುದ್ರೇಗೌಡ, ಕಾರ್ಯದರ್ಶಿ ಸುರೇಶ್ ಬೀಡು, ಎನ್.ಎಂ.ಹೆಗ್ಡೆ ಉಪಸ್ಥಿತರಿದ್ದರು.