×
Ad

ಶಿರ್ವ: ಪ್ರತಿಭಾ ಪುರಸ್ಕಾರ, ಸನ್ಮಾನ

Update: 2018-02-06 20:15 IST

ಶಿರ್ವ, ಫೆ.6: ಶಿರ್ವದ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮೈ-ಟೆಕ್ ಐಟಿಐ ಸಮೂಹ ಶಿಕ್ಷಣ ಸಂಸ್ಥೆಗಳ 12ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಐಟಿಐನ ರ್ಯಾಂಕ್ ವಿದ್ಯಾರ್ಥಿ ಅಶ್ವಿನ್ ಕುಮಾರ್ ಅವರನ್ನು ಸಮ್ಮಾನಿಸ ಲಾಯಿತು.

ಬೆಂಗಳೂರು ಸೆಲ್ಕೋ ದಕ್ಷಿಣ ವಲಯ ಮಣಿಪಾಲ ಎಜಿಎಂ ಗುರುಪ್ರಕಾಶ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಉದಯ ಆಚಾರ್ಯ ವಹಿಸಿದ್ದರು. ಹಳೆ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಟಾಪರ್ ವಿದ್ಯಾರ್ಥಿ ಗಳನ್ನು ಸಮ್ಮಾನಿಸಲಾಯಿತು.

ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜಾ ಪೂಜಾರ್ತಿ, ವಿನಾಯಕ ಕಾಮತ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಬ್ರಿ ಉದಯ ಕುಮಾರ್ ಶೆಟ್ಟಿ, ಸೆಲ್ಕೋವಿನ ಸುರೇಶ್ ನಾಯಕ್, ಪ್ರದೀಪ್ ದೇವಾಡಿಗ, ನಿಜಾಮ್ಮುದ್ದಿನ್, ರೇಖಾ ಶೆಣೈ, ಅಕ್ಷತಾ, ದೀಪಕ್, ದಿನೇಶ ಮೊದಲಾದವರು ಉಪಸ್ಥಿತರಿದ್ದರು.

ಸುಶಾಂತೇಶ್ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರದೀಪ್ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ನಿಖಿತಾ ಸ್ವಾಗತಿಸಿ, ಲಾವಣ್ಯ ಕಾರ್ಯಕ್ರಮ ನಿರೂಪಿಸಿ, ಸಾಯಿರಾಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News