ಕಣ್ಣಿಗೆ ಕಾಣಿಸದ ಹೆಣ್ಣಿನ ಶೋಷಣೆ ಹೆಚ್ಚು ಭೀಕರ: ಡಾ.ದುಗ್ಗಪ್ಪಕಜೆಕಾರ್
ಉಡುಪಿ, ಫೆ.6: ಬಹಿರಂಗವಾಗಿ ಕಾಣುವ ಹೆಣ್ಣಿನ ಶೋಷಣೆಗಿಂತ ಕಣ್ಣಿಗೆ ಕಾಣಿಸದೆ ಇರುವ ಹೆಣ್ಣಿನ ಶೋಷಣೆ ಹೆಚ್ಚು ಭೀಕರವಾದುದು ಎಂದು ತೆಂಕನಿಡಿ ಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಡಾ.ದುಗ್ಗಪ್ಪಕಜೆಕಾರ್ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಲಿಂಗತ್ವದ ವಿದ್ಯಮಾನಗಳು ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಸ್ತ್ರೀವಾದ ಎಂದು ಪ್ರತಿಪಾದಿಸುವುದಕ್ಕಿಂತ ಮಾನವತಾ ವಾದವನ್ನು ಪ್ರತಿಪಾದಿ ಸುವ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಲಭ್ಯವಿರುವ ಸೌಲಭ್ಯಗಳ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಹೆಣ್ಣು ಮಕ್ಕಳಲ್ಲಿ ಜಾಗೃತಿ ಉಂಟು ಮಾಡಲು ಅಭಿಯಾನ ಕೈಗೊಳ್ಳಬೆೀಕು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಲಾನಿಕಾಯದ ಡೀನ್ ಪ್ರೊ.ಸೋಜನ್ ಕೆ.ಜಿ., ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಚಾಲಕ ಡಾ.ಗುರುರಾಜ ಪ್ರಭು ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರ ಕೆ. ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಮಾಜಶಾಸ್ತ್ರ ಸಹಪ್ರಾಧ್ಯಾಪಕ ಪ್ರೊ.ಪ್ರಕಾಶ ಕ್ರಮ ಧಾರಿ ವಂದಿಸಿದರು. ವಿದ್ಯಾರ್ಥಿನಿ ದಿವ್ಯ ವೈ.ಜಿ. ಕಾರ್ಯಕ್ರಮ ನಿರೂಪಿಸಿ ದರು.