×
Ad

ಅಡಿಕೆ ಬೆಳೆಗಾರರ ಮಂಡಳಿ ರಚನೆಗೆ ಕ್ರಮ: ಸಚಿವ ಮಲ್ಲಿಕಾರ್ಜುನ್

Update: 2018-02-06 20:43 IST

ಮಂಗಳೂರು, ಫೆ.6:ಅಡಿಕೆ ಬೆಳೆಗಾರರ ರಕ್ಷಣೆಗೆ ಅಡಿಕೆ ಬೆಳೆಗಾರರ ಮಂಡಳಿ ರಚಿಸುವಂತೆ ಕೃಷಿ ವಿವಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲಾಗಿದ್ದು, ರಚನೆಗೆ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ತಜ್ಞರು ನೀಡುವ ವರದಿಯನ್ನು ಆಧರಿಸಿ ಕ್ರಮ ಜರಗಿಸಲಾಗುವುದು ಎಂದರು.

ರಾಜ್ಯದ ತೋಟಗಾರಿಕಾ ಇಲಾಖೆಯ ನೆರವಿನಿಂದ ರೈತರ ತೋಟಗಳಲ್ಲಿ 2017-18ನೆ ಸಾಲಿನಿಂದ ಮುಂದಿನ 5 ವರ್ಷಗಳಲ್ಲಿ 10,000 ಹೆಕ್ಟೇರು ಗೇರು ಕೃಷಿ ಬೆಳೆಸಲು ಗುರಿ ನಿಗದಿಪಡಿಸಲಾಗಿದೆ. 2017-18ನೆ ಸಾಲಿನಲ್ಲಿ 2,149 ಹೆಕ್ಟೇರು ಗೇರು ಕೃಷಿ ಬೆಳೆಸಲು ಭೌತಿಕ ಗುರಿ ನಿಗದಿಯಾಗಿದೆ. ಜನವರಿ ಅಂತ್ಯಕ್ಕೆ 1,573 ಹೆಕ್ಟೇರ್ ಪ್ರದೇಶ ವಿಸ್ತರಣೆ ಮಾಡಲಾಗಿದೆ. ಗೇರು ಕೃಷಿಯನ್ನು ಪ್ರೋತ್ಸಾಹಿಸಲು ಇಲಾಖೆಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಐವನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು 2016-17ನೆ ಸಾಲಿನ ಅಯವ್ಯಯದಲ್ಲಿ ಗೇರು ಉತ್ಪಾದನೆಗಾಗಿ ಹಣ ಮೀಸಲಿರಿಸಿಲ್ಲ. ಆದರೆ 2017-18ನೆ ಸಾಲಿನ ಆವ್ಯಯದಲ್ಲಿ ಗೇರು ಕೃಷಿ ಉತ್ಪಾದನೆಗೆ 699 ಲಕ್ಷ ರೂ. ಮೀಸಲಿಡಲಾಗಿದೆ. ರಾಜ್ಯದಲ್ಲಿ ಜಿಲ್ಲಾವಾರು ಅಂದಾಜು 1,08,107 ಮೆ.ಟನ್ ಗೇರು ಉತ್ಪಾದನೆ ಇರುತ್ತದೆ ಸಚಿವ ಮಲ್ಲಿಕಾರ್ಜುನ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News