×
Ad

ಬಡ ಯುವತಿಗೆ ಕಿಡ್ನಿ ವೈಫಲ್ಯ : ನೆರವಿಗೆ ಮನವಿ

Update: 2018-02-06 21:18 IST

ಮೂಡುಬಿದಿರೆ, ಫೆ. 6: ತಾಯಿಯಿಲ್ಲದ, ತಂದೆಯ ಆಸರೆಯಿಲ್ಲದೆ, ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಯುವತಿಯೊಬ್ಬಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಆಕೆಗೆ ಸಹೃದಯರ ನೆರವಿನ ಅಗತ್ಯವಿದೆ.

ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಪುತ್ರಿ ಪೂಜಾ ಪೂಜಾರಿ (23) ಕಿಡ್ನಿ ವೈಫಲ್ಯ ಹೊಂದಿರುವ ಯುವತಿ. ಈಕೆ 2 ವರ್ಷವಿರುವಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯೂ ಬಿಟ್ಟುಹೋಗಿದ್ದು, ಅನಾಥವಾಗಿದ್ದ ಈಕೆ ಆಶ್ರಯ ಪಡೆದದ್ದು ಬಡ ವಿಧವೆಯಾಗಿರುವ ಅತ್ತೆಯ ಮನೆಯಲ್ಲಿ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅತ್ತೆಗೆ ನೆರವಾಗುತ್ತಿದ್ದ ಪೂಜಾಗೆ ಕಳೆದ ಮೂರು ವರ್ಷಗಳಿಂದ ಅಧಿಕ ರಕ್ತದೊತ್ತಡ ಇತ್ತು. ಆರ್ಥಿಕ ಸಂಕಷ್ಟದಲ್ಲೂ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ನಡೆಸಿರುವ ಪೂಜಾಳ ಭವಿಷ್ಯದ ಕನಸುಗಳು ಕಿಡ್ನಿ ವೈಫಲ್ಯದಿಂದ ಕಮರಿದೆ.

ಅಧಿಕ ರಕ್ತದೊತ್ತಡ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ. ಅಮಿತ್ ಡಿಸಿಲ್ವಾ ಅವರ ಬಳಿ ಚಿಕಿತ್ಸೆಗೆ ಹೋದಾಗ ಪೂಜಾಳ ಕಿಡ್ನಿ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು ಕೂಡಲೇ ಡಯಾಲಿಸೀಸ್ ಆರಂಭಿಸುವಂತೆ ಸೂಚಿಸಿದ್ದಾರೆ. ಡಯಾಲಿಸೀಸ್ಗೆ ತಿಂಗಳಿಗೆ 25 ಸಾವಿರ ರೂಪಾಯಿ ಖರ್ಚು ಬರುತ್ತದೆ. ಕಿಡ್ನಿ ಕಸಿ ಮಾಡಲು ಸುಮಾರು 15 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಅಷ್ಟೊಂದು ಮೊತ್ತವನ್ನು ಅಕೆ ಸಂಪಾದಿಸುವುದು ಅಸಾಧ್ಯವೇ ಸರಿ. ತನ್ನವರೆಂದು ಯಾರೂ ಇಲ್ಲದ ಈ ಯುವತಿ ಬಾಳಿ ಬೆಳಕಾಗಬೇಕಾದವಳು. ಕಷ್ಟಪಟ್ಟು ಸಾಕಿದ ಅತ್ತೆಗೆ ನೆರವಾಗಬೇಕಿದ್ದ ಹಾಗೂ ಆ ಮನೆಯ ಬೆಳಕಾಗಬೇಕಿದ್ದ ಯುವತಿ ಇದೀಗ ಸಹಾಯದ ಅಪೇಕ್ಷೆಯೊಂದಿಗೆ ಸಹೃದಯ ಸಮಾಜದ ಮುಂದೆ ನಿಂತಿದ್ದಾರೆ. ಪೂಜಾ ಪೂಜಾರಿ ಅವರ ಮನೆಯವರ ಮೊಬೈಲ್ ಸಂಖ್ಯೆ  : 9920670402

ಬ್ಯಾಂಕ್ ಖಾತೆ :

Bank : Canara Bank
Name : Pooja Poojari
A/c No : 0646101013190
Ifsc code : CNRB0000646

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News