×
Ad

ಚಾಂತಾರು: ಮ್ಯಾಥ್ಯೂ ಸಿ.ನೈನಾನ್‌ಗೆ ಸನ್ಮಾನ

Update: 2018-02-06 21:37 IST

ಬ್ರಹ್ಮಾವರ, ಫೆ.6: ಚಾಂತಾರು ಚಾನ್‌ಸ್ಟಾರ್ ಯೂತ್ ಕ್ಲಬ್‌ನ 21ನೇ ವಾರ್ಷಿಕೋತ್ಸವ ಇತ್ತೀಚೆಗೆ ಚ್ಯವನ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಚಾಂತಾರಿನ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ನಿರ್ದೇಶಕ ಪ್ರೊ.ಮ್ಯಾಥ್ಯೂ ಸಿ.ನೈನಾನ್ ಅವರನ್ನು ಸಚಿವರು ಸನ್ಮಾನಿಸಿದರು. ಅಲ್ಲದೇ ಚಾಂತಾರಿನ ಪ್ರತಿಭಾನ್ವಿತ ವಿದ್ಯಾರ್ಥಿ ಆದಿತ್ಯ ಕಾಮತ್ ಅವರ ಯಕೃತ್ ಕಸಿಗೆ ಹಾಗೂ ಚಾಂತಾರಿನ ರೋಹಿಣಿ ನಾಯಕ್ ಇವರಿಗೆ ವೈದ್ಯಕೀಯ ನೆರವನ್ನು ವಿತರಿಸಲಾಯಿತು.

ಬ್ರಹ್ಮಾವರದ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಹಾಗೂ ಚಾಂತಾರಿನ ಉದ್ಯಮಿ ಜಯರಾಮ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಚಾನ್‌ಸ್ಟಾರ್ ಯೂತ್ ಕ್ಲಬ್‌ನ ಅಧ್ಯಕ್ಷ ದಾಮೋದರ ಮೆಂಡನ್ ಅತಿಥಿ ಗಳನ್ನು ಸ್ವಾಗತಿಸಿದರು. ನಾಗೇಶ್ ಚಾಂತಾರು ವರದಿ ವಾಚಿಸಿ, ಮನೋಜ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಸುಧೀರ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಚಾಂತಾರಿನ ಭರತಾಂಜಲಿ ನೃತ್ಯ ಕಲಾಶಾಲೆಯ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ, ರಾಜೇಶ್ ಶ್ಯಾನುಭಾಗ್ ಇವರಿಂದ ಸಂಗೀತ ಕಾರ್ಯಕ್ರಮ, ಓಂಕಾರ ಕಲಾವಿದರು ತೆಕ್ಕಟ್ಟೆ ಇವರಿಂದ ‘ಎಲ್ಲಾ ನಿನ್ನಿಂ’ ನಗೆ ನಾಟಕ ಪ್ರದರ್ಶಿಸಲ್ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News