×
Ad

ಮಣಿಪಾಲ: ಮಾಧವಕೃಪಾ ಶಾಲೆಗೆ ಕರಾಟೆಯಲ್ಲಿ ಪ್ರಶಸ್ತಿ

Update: 2018-02-06 22:13 IST

ಮಣಿಪಾಲ, ಫೆ.6: ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಹಾಗೂ ಅಲೈಡ್ ಆರ್ಟ್ಸ್ ಇದರ 28ನೇ ವರ್ಷದ ರಾಜ್ಯ ಮಟ್ಟದ ‘ಕರಾಟೆ ಚಾಂಪಿಯನ್‌ಷಿಪ್’ ಇತ್ತೀಚೆಗೆ ಪಡುಬಿದ್ರಿಯಲ್ಲಿ ಜರುಗಿತು.

ಈ ಸ್ಪರ್ಧಾಕೂಟದಲ್ಲಿ ಮಣಿಪಾಲ ಮಾಧವಕೃಪಾ ಶಾಲೆಯ ವಿದ್ಯಾರ್ಥಿಗಳಾದ ಶ್ಯಾರಲ್ ಲೊಬೊ, ಮಾನಸ್, ಧನ್ವಿನ್ ಎಸ್. ಶೆಟ್ಟಿ, ರಿಷಿತ್ ಆರ್. ಹೆಗ್ಡೆ, ಆಕಾಶ್ ಪಿ. ನಾಯಕ್, ಮೇಘರಾಜ್ ಎಂ, ಶ್ರೀಯ, ಮನೀಶ್, ಸ್ವಸ್ತಿ ರಾವ್, ಆದಿತ್ಯ ಪಲಿಮಾರ್, ಸಾಕೇತ್ ಎಚ್. ನಾಯಕ್ ಅವರು 2 ಚಿನ್ನ, 6 ಬೆಳ್ಳಿ ಹಾಗೂ 4 ಂಚಿನ ಪದಕಗಳನ್ನು ಜಯಿಸಿದ್ದಾರೆ.

ಇವರನ್ನು ಶಾಲಾ ಸಂಚಾಲಕರಾದ ಪಿ.ಜಿ.ಪಂಡಿತ್, ಪ್ರಾಂಶುಪಾಲೆ ಜೆಸ್ಸಿ ಆಂಡ್ರೂಸ್, ಉಪ ಪ್ರಾಂಶುಪಾಲೆ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯಿನಿ ಉಮಾರಾವ್, ಶಾಲಾ ಕರಾಟೆ ಶಿಕ್ಷಕ ರವಿಶಂಕರ್ ನಾಯಕ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News