ವಾಟ್ಸಾಪ್ ಗ್ರೂಪ್‌ನಲ್ಲಿ ಮಾನಹಾನಿ: ದೂರು
Update: 2018-02-06 22:24 IST
ಉಡುಪಿ, ಫೆ. 6: ವಾಟ್ಸಾಪ್ ಗ್ರೂಪ್‌ನಲ್ಲಿ ಮಾನಹಾನಿ ಹಾಗೂ ತೇಜೋ ವಧೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.3ರಂದು ರಾಕೇಶ್ ಮಲ್ಲಿ ಆ್ಯಂಡ್ ಫ್ರೆಂಡ್ಸ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಬಂಗೇರ ದಿನೇಶ್ ಎಂಬವರು ಸಾಲಿಗ್ರಾಮ ಕಾರ್ಕಡದ ಕೆ.ಮಾಧವ ಎಂಬವರ ಮಗನ ಫೋಟೋವನ್ನು ಬಳಸಿ, ಆತನ ಬಗ್ಗೆ ಮತ್ತು ಮಾಧವರ ಬಗ್ಗೆ ದುರುದ್ದೇಶದಿಂದ ಮತ್ತು ಕಾನೂನು ಬಾಹಿರವಾಗಿ ಕೆಟ್ಟದಾಗಿ ಬರೆದು ಪ್ರಸರಣ ಮಾಡಿ ಮಾನಹಾನಿ ಹಾಗೂ ತೇಜೋವಧೆ ಉಂಟು ಮಾಡಿರುವುದಾಗಿ ದೂರಿ ನಲ್ಲಿ ತಿಳಿಸಲಾಗಿದೆ.