ಝೈಬುನ್ನೀಸಾ ನಿಗೂಢ ಮೃತ್ಯು: ಕುಟುಂಬದೊಂದಿಗೆ ಗೃಹ ಮಂತ್ರಿಯನ್ನು ಭೇಟಿಯಾದ ಎಸ್.ಡಿ.ಪಿ.ಐ ನಿಯೋಗ
Update: 2018-02-06 22:50 IST
ಮಂಗಳೂರು, ಫೆ. 6: ಕೆ ಆರ್ ಪೇಟೆಯ ಅಲ್ಪ ಸಂಖ್ಯಾತ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಉಪ್ಪಿನಂಗಡಿ ಮೂಲದ ಬಾಲಕಿ ಝೈಬುನ್ನೀಸಾಳ ತನಿಖೆ ಸೂಕ್ತ ದಿಕ್ಕಿನಲ್ಲಿ ಸಾಗಬೇಕು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಝೈಬುನ್ನೀಸಾಳ ಕುಟುಂಬದೊಂದಿಗೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ , ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎ ಎಮ್ ಅಥಾವುಲ್ಲಾ ಒಳಗೊಂಡ ಎಸ್ ಡಿ ಪಿ ಐ ನಿಯೋಗ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತಲ್ಲದೆ, ಕುಟುಂಬದ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಿತು.
ಈ ಸಂದರ್ಭ ಝೈಬುನ್ನೀಸಾಳ ತಾಯಿ ಝುಬೈದಾ, ಮುಜಾಹಿದ್ ಪಾಶಾ, ಎ ಎಮ್ ಅಥಾವುಲ್ಲ ಸೇರಿದಂತೆ ಸ್ಥಳೀಯ ಮುಖಂಡರಾದ ಅಬೂಬಕ್ಕರ್ ಎಂ ಪಿ, ಇಸ್ಮಾಯಿಲ್ ಹಾಗು ಇತರರು ಉಪಸ್ಥಿತರಿದ್ದರು.