×
Ad

ನಿಷೇಧಿತ ತಂಬಾಕು ಸಾಗಾಟ: ಆರೋಪಿ ಸೆರೆ

Update: 2018-02-06 23:30 IST

ಮಂಗಳೂರು, ಫೆ.6: ರೈಲಿನಲ್ಲಿ ನಿಷೇಧಿತ ತಂಬಾಕು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಸುರಕ್ಷತಾ ಪಡೆಯ ಪೊಲೀಸರು ಮಂಗಳವಾರ ಪತ್ತೆ ಹಚ್ಚಿದ್ದಾರೆ.
ಉತ್ತರ ಪ್ರದೇಶದ ದಿನೇಶ್ ಚೌಹಾನ್ ಬಂಧಿತ ಆರೋಪಿ. ಆರೋಪಿಯಿಂದ ವಶಪಡಿಸಿಕೊಂಡ 60 ಕಿ.ಗ್ರಾಂ ತೂಕದ ಈ ತಂಬಾಕಿನ ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. 

ಮಂಗಳೂರಿನಿಂದ ಕಾಂಞಂಗಾಡ್ ಕಡೆಗೆ ಮಲಬಾರ್ ರೈಲಿನಲ್ಲಿ ನಿಷೇಧಿತ ತಂಬಾಕು ಸಾಗಾಟ ಮಾಡುತ್ತಿದ್ದಾಗ ರೈಲ್ವೆ ಸುರಕ್ಷತಾ ಪಡೆಯ ಎಎಸ್ಸೈ ವಿ.ಕೆ. ವಿನಾಯ್ ಕುರಿಯನ್, ಕಾನ್‌ಸ್ಟೇಬಲ್‌ಗಳಾದ ಪಿ. ಸುರೇಶನ್, ಮಣಿ ಕೆ.ಎ., ಟಿ.ಪಿ. ಪ್ರಮೋದ್ ಅವರನ್ನು ಒಳಗೊಂಡ ತಂಡವು ಮಂಜೇಶ್ವರದಲ್ಲಿ ವಿಶೇಷ ತಪಾಸಣೆ ನಡೆಸಿದಾಗ ಸಾಗಾಟ ಜಾಲ ಪತ್ತೆಯಾಗಿದೆ.

ಆರೋಪಿಯು 4 ಬ್ಯಾಗ್ ಗಳಲ್ಲಿ ತಂಬಾಕು ತುಂಬಿಸಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಹಾಗೂ ವಶಪಡಿಸಿಕೊಂಡ ಪೊಲೀಸರು ಸೊತ್ತುಗಳನ್ನು ಮುಂದಿನ ತನಿಖೆಗೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News