×
Ad

ಪುತ್ತೂರು : ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

Update: 2018-02-06 23:48 IST

ಪುತ್ತೂರು, ಫೆ. 6: ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ್ದ ಸಾಮ್‌ಸಂಗ್ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಅನ್ನು ವಿದ್ಯಾರ್ಥಿಯೊಬ್ಬ ಪುತ್ತೂರು ನಗರ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. 

ಪುತ್ತೂರು ತಾಲ್ಲೂಕಿನ ನರಿಮೊಗ್ರು ಗ್ರಾಮದ ಮುಕ್ವೆ ನಿವಾಸಿ ಎಂ.ಕಾಲೀಸ್ ಅವರ ಪುತ್ರ, ಇಲ್ಲಿನ ಕೊಂಬೆಟ್ಟು ಸರ್ಕಾರಿ ಪ್ರೌಢ ಶಾಲೆಯ 9ನೆ ತರಗತಿಯ ವಿದ್ಯಾರ್ಥಿ ಇಬ್ರಾಹಿಂ ಬಾತಿಷಾ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಸಂಜೆ ಶಾಲೆಬಿಟ್ಟು ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಇಬ್ರಾಹಿಂ ಬಾತಿಷ್ ನಿಗೆ ಬಸ್‌ ನಿಲ್ದಾಣದಲ್ಲಿ ಮೊಬೈಲ್  ಬಿದ್ದು ಸಿಕ್ಕಿತ್ತು. ಅದನ್ನು ವಾರಸುದಾರರಿಗೆ ಹಿಂತಿರುಗಿಸುವ ಸಲುವಾಗಿ ಆತ ಪೊಲೀಸ್ ಠಾಣೆಗೆ ಕೊಂಡೊಯ್ದು ಎಸ್‌ಐ ಅಜೇಯ್‌ ಕುಮಾರ್ ಅವರ ಕೈಗೆ ಒಪ್ಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News