×
Ad

ಉಡುಪಿ; ಪೋಷಣಾ ಭತ್ಯೆಗೆ ಅರ್ಜಿ ಆಹ್ವಾನ

Update: 2018-02-07 19:36 IST

ಉಡುಪಿ, ಫೆ.7: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ (ಬುದ್ಧಿಮಾಂದ್ಯ) ವಿಕಲಚೇತನ ಫಲಾನುಭವಿಗಳನ್ನು ಜವಾಬ್ದಾರಿ ಯಿಂದ ಪೋಷಿಸುವ ಪೋಷಕರಿಗೆ ಮಾತ್ರ ಮಾಸಿಕ 500 ರೂ. ಪೋಷಣಾ ಭತ್ಯೆ ನೀಡುವ ಸಲುವಾಗಿ ಅರ್ಹ ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಫೆ. 20ರೊಳಗೆ ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಸ್ತಿ ತೆರಿಗೆ ಪಾವತಿ ರಶೀದಿ ಪ್ರತಿ, ಜಿಲ್ಲಾ ಸರಕಾರಿ ವೈದ್ಯರಿಂದ ಬುದ್ದಿಮಾಂದ್ಯತೆ ಬಗ್ಗೆ ದೃಢೀಕರಣ ಪತ್ರ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ನಗರಸಭಾ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗಳಿಂದ ಪಡೆಯಬಹುದು ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News