ಫೆ.11: ಜಮೀಯ್ಯತುಲ್ ಫಲಾಹ್ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
Update: 2018-02-07 19:43 IST
ಉಡುಪಿ, ಫೆ.7: ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಆಶ್ರಯ ದಲ್ಲಿ ಉಡುಪಿ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ, ವೈದ್ಯಕೀಯ ಪ್ರತಿ ನಿಧಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಹಾಗೂ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರ ಬಿ.ಆರ್.ಅಂಬೇಡ್ಕರ್ ಆಟೋ ರಿಕ್ಷಾ ನಿಲ್ದಾಣದ ಚಾಲಕರು ಮತ್ತು ಮಾಲಕರ ಸಂಘದ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ತೆಂಕನಿಡಿಯೂರು ಗ್ರಾಪಂ ಸಮುದಾಯ ಭವನದಲ್ಲಿ ಫೆ.11ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ನಡೆಯುವ ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ಸ್ತ್ರೀರೋಗ, ನೇತ್ರ ಹಾಗೂ ಚರ್ಮ ತಪಾಸಣೆಯನ್ನು ಮಾಡಲಾಗು ವುದು. ಡಾ.ಪವಿತ್ರ, ಡಾ.ನರೇಂದ್ರ ಶೆಣೈ, ಡಾ.ವೆಲೆಂಟಿನಾ, ಡಾ.ಗಣೇಶ್ ಕಾಮತ್, ಡಾ.ಮುಹಮ್ಮದ್ ಫಹೀಮ್ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.