ಎಸ್ ವೈ ಎಸ್ ಮಂಗಳೂರು ಝೋನ್ 'ಅಸೆಂಬ್ಲೇಜ್' ಕಾರ್ಯಕ್ರಮ
ಮಂಗಳೂರು, ಫೆ. 7: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ರಾಜ್ಯದ್ಯಂತ ಸಂಘಟನೆ ಬಲಿಷ್ಠಕ್ಕಾಗಿ ನಡೆಯುತ್ತಿರುವ ಅಸೆಂಬ್ಲೇಜ್ ಎಂಬ ಕಾರ್ಯಕ್ರಮ ಜನವರಿ ತಿಂಗಳಲ್ಲಿ ಎಲ್ಲಾ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸೆಂಟರ್ ಗಳಲ್ಲಿ ನಡೆದು ಇಂದು ಮೇಲ್ಘಟಕವಾದ ಮಂಗಳೂರು ಝೋನ್ ಅಸೆಂಬ್ಲೇಜ್ ಕಾರ್ಯಕ್ರಮ ನಗರದ ಪುರಭವನದಲ್ಲಿ ಝೋನ್ ಅಧ್ಯಕ್ಷ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಯದ್ ಅಲವಿ ತಂಙಲ್ ಕಿನ್ಯ ದುಆದೊಂದಿಗೆ ಪ್ರಾರಂಭಗೊಂಡು, ಜಿಲ್ಲಾಧ್ಯಕ್ಷ ಉಸ್ಮಾನ್ ಸಅಧಿ ಉದ್ಘಾಟಿಸಿದರು. ರಾಜ್ಯ ಎಸ್ ವೈ ಎಸ್ ನೇತಾರರಾದ ಎಸ್ ಪಿ ಹಂಝ ಸಖಾಫಿ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಫ್ ಹಾಜಿ, ಎಸ್ ವೈ ಎಸ್ ನಾಯಕರುಗಳಾದ ಜಲಾಲ್ ತಂಙಲ್. ಎಸ್ ಎಂ ತಂಙಲ್ ಉರುಮನೆ ಸಅದಿ, ಬಶೀರ್ ಮದನಿ ಕಂಡಿಗ, ಮುಹಮ್ಮದ್ ಹಾಜಿ, ಏಷ್ಯನ್ ಬಾವ ಹಾಜಿ, ಉಮರ್ ಮಾಸ್ಟರ್, ಅಬ್ದುಲ್ಲ ಮುಸ್ಲಿಯಾರ್, ಹಮೀದ್ ಬಜ್ಪೆ, ಲುಕ್ಮಾನ್ ಮುಸ್ಲಿಯಾರ್, ಮುನೀರ್ ಸಖಾಫಿ, ಮುತ್ತಲಿಬ್ ಹಾಜಿ ನಾರ್ಶ, ಸಲೀಂ ಅಡ್ಯಾರ್, ಹಮೀದ್ ಮೂಡಬಿದ್ರೆ, ಇಸ್ಮಾಯಿಲ್ ಎನ್ ಕೆ ಎಂ ಹಾಗು ಇತರರು ಉಪಸ್ಥಿತರಿದ್ದರು. ಝೋನ್ ಪ್ರಧಾನ ಕಾರ್ಯದರ್ಶಿ ಬಾವ ಫಕ್ರುದ್ದೀನ್ ಸ್ವಾಗತಿಸಿದರು.