ಗರಗರ ಮಂಡಲ ಜುಗಾರಿ: 7 ಮಂದಿ ಬಂಧನ
Update: 2018-02-07 21:27 IST
ಉಡುಪಿ, ಫೆ.7: ಯಡಾಡಿ-ಮತ್ಯಾಡಿ ಗ್ರಾಮದ ಕುಡಾಲು ಯಕ್ಷಿ ದೇವ ಸ್ಥಾನದ ಬಳಿ ಬುಧವಾರ ಗರಗರ ಮಂಡಲ ಎಂಬ ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಹಳ್ಳಾಡಿ ಹರ್ಕಾಡಿಯ ಸುಧೀರ್(32), ಅವಿನಾಶ್(40), ಯಡ್ತಾಡಿಯ ಕಾಳಪ್ಪನಾಯ್ಕ(50), ಯಡಾಡಿ-ಮತ್ಯಾಡಿಯ ಶೇಖರ(50), ಅನಿಲ್ ಕುಮಾರ್ ಶೆಟ್ಟಿ(27), ಮಧುವನದ ಅಬ್ದುಲ್ ಸತ್ತಾರ್(26), ಗಿಳಿಯಾರಿನ ದಯಾನಂದ ಶೆಟ್ಟಿ(29) ಬಂಧಿತ ಆರೋಪಿಗಳು. ಇವರಿಂದ 6,780ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.