×
Ad

ಪೆರ್ಡೂರು ಮಕ್ಕಳ ನಾಟಕೋತ್ಸವದ ಸಮಾರೋಪ

Update: 2018-02-07 21:41 IST

ಪೆರ್ಡೂರು, ಫೆ.7: ಗ್ರಾಮೀಣ ಮಕ್ಕಳಲ್ಲಿ ನಾಟಕ, ಕಲೆ ಕುರಿತ ಆರೋಗ್ಯ ಪೂರ್ಣ ಅಭಿರುಚಿ ಮೂಡಿಸಲು ನಾಟಕೋತ್ಸವ ಒಂದು ಸಾಂಸ್ಕೃತಿಕ ಅಭಿ ಯಾನವಾಗಿದೆ. ಇದು ಸಂಘಟನಾತ್ಮಕ ರೂಪ ಪಡೆಯಬೇಕಾಗಿದೆ ಎಂದು ಕವಿ, ರಂಗಕರ್ಮಿ ಗುರುರಾಜ ಮಾರ್ಪಳ್ಳಿ ಹೇಳಿದ್ದಾರೆ.

ಪೆರ್ಡೂರು ಪ್ರೌಢಶಾಲಾ ಬಯಲುರಂಗ ಮಂದಿರಲ್ಲಿ ಇತ್ತೀಚೆಗೆ ನಡೆದ ಮೂರು ದಿನಗಳ ಮಕ್ಕಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಮಾತನಾಡಿ, ನಾಟಕಗಳಲ್ಲಿ ಭಾಗಿಯಾದವರು ಬಾಳಿನಲ್ಲಿ ಎಂದಿಗೂ ಸೋಲು ವುದಿಲ್ಲ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ನಾಟಕದಲ್ಲಿ ಪಾತ್ರ ಪ್ರವೇಶ ತುಂಬಾ ಸಹಾಯ ಮಾಡುತ್ತದೆ. ಎಳವೆಯಲ್ಲೇ ಮಕ್ಕಳು ನಾಟಕದ ಮಹತ್ವ ಅರಿಯುವಂತೆ ಮಾಡಲು ನಾಟಕೋತ್ಸವಗಳು ಅಗತ್ಯ ಎಂದರು.

ಅಧ್ಯಕ್ಷತೆಯನ್ನು ಮಾಹೆ ಮಣಿಪಾಲ ಕುಲಸಚಿವ ಡಾ.ನಾರಾಯಣ ಸಭಾ ಹಿತ ವಹಿಸಿದ್ದರು. ಪೆರ್ಡೂರು ಗ್ರಾಪಂ ಉಪಾಧ್ಯಕ್ಷ ಸುರೇಶ ಸೇರ್ವೆಗಾರ, ಮುಖ್ಯೋಪಾಧ್ಯಾಯ ಎಚ್.ಎಸ್.ಗಣೇಶ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಂಗನಟ ಪ್ರಸನ್ನ ಹೆಬ್ಬಾರ ಅವರನ್ನು ಸಮ್ಮಾನಿಸಲಾಯಿತು. ನಾಟಕೋತ್ಸವದ ರೂವಾರಿ ಜಿ.ಪಿ.ಪ್ರಭಾಕರ ತುಮರಿ ಪ್ರಾಸ್ತಾವಿಕ ಮಾತ ನಾಡಿ ಸ್ವಾಗತಿಸಿದರು. ಉಷಾರಾಣಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸ್ಟ್ಯಾನಿ ಮಿನೇಜಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News