×
Ad

​ವ್ಯಕ್ತಿ ನಾಪತ್ತೆ

Update: 2018-02-07 21:44 IST

ಮಂಗಳೂರು, ಫೆ.7: ಏಳಿಂಜೆ ಗ್ರಾಮದ ಭಾಸ್ಕರ ಆಚಾರ್ಯ(40) ಎಂಬವರು ಫೆ. 2ರಂದು ಬೆಳಗ್ಗೆ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಅವರು 5.5 ಅಡಿ ಎತ್ತರ, ಬಿಳಿ ಮೈ ಬಣ್ಣ , ದುಂಡು ಮುಖ, ತುಳು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಬಿಳಿ ಬಣ್ಣದ ಅರ್ಧತೋಳಿನ ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ವೃತ್ತಿ ಚಿನ್ನಾಭರಣ ತಯಾರಿಸುವುದಾಗಿದೆ. ಇವರ ಬಗ್ಗೆ ಮಾಹಿತಿ ಸಿಕ್ಕದ್ದಲ್ಲಿ ಮುಲ್ಕಿ ಪೊಲೀಸ್ ಠಾಣೆಗೆ 0824-2290533, 9480805359, 9480805332 ದೂರವಾಣಿಗೆ ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800ಕ್ಕೆ ಕರೆ ಮಾಡಿ ತಿಳಿಸುವಂತೆ ಮುಲ್ಕಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News