×
Ad

ಉಡುಪಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ: ತುಂತುರು ಮಳೆ

Update: 2018-02-07 21:46 IST

ಉಡುಪಿ, ಫೆ.7: ಜಿಲ್ಲೆಯಲ್ಲಿ ವರ್ಷದ ಈ ಅವಧಿಯಲ್ಲಿ ಕಂಡುಬರುವ ವಾತಾವರಣಕ್ಕೆ ವ್ಯತಿರಿಕ್ತವಾಗಿ ಇಂದು ಜಿಲ್ಲೆಯ ಹೆಚ್ಚಿನ ಕಡೆ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂತಲ್ಲದೇ, ಸಂಜೆಯ ವೇಳೆ ಅಲ್ಲಲ್ಲಿ ತುಂತುರು ಮಳೆಯೂ ಸುರಿದಿದೆ.

ಇಂದು ಬೆಳಗಿನಿಂದ ದಿನವಿಡೀ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸೂರ್ಯನ ದರ್ಶನವೇ ಆಗಿಲ್ಲ. ಹೀಗಾಗಿ ನಿನ್ನೆಯವರೆಗಿದ್ದ ಕಡುಬಿಸಿಲಿನ ವಾತಾವರಣ ತಂಪಾಗಿ ಬದಲಾಯಿತು. ವಾಯುಭಾರ ಕುಸಿತದಿಂದ ಈ ವಾತಾವರಣ ಕಾಣಿಸಿಕೊಂಡಿದ್ದು, ಇನ್ನೆರಡು ದಿನ ಇದೇ ಪರಿಸ್ಥಿತಿ ಮುಂದುವರಿಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಇಂದು ಬೆಳಗಿನಿಂದ ಹವಾಮಾನದಲ್ಲಿ ಹಠಾತ್ತನೆ ಬದಲಾವಣೆ ಕಾಣಿಸಿಕೊಂಡಿದ್ದು, ಕಪ್ಪು ಮೋಡಗಳಲ್ಲಿ ಸೂರ್ಯ ಸಂಪೂರ್ಣ ಮರೆಯಾಗಿ ಹೋಗಿದ್ದ. ಅನಂತರವೂ ಸೂರ್ಯ ಮೋಡಗಳ ಮರೆಯಲ್ಲಿ ಆಗಾಗ ಇಣುಕಿದ್ದು ಬಿಟ್ಟರೆ ಬಿಸಿಲಿನ ದರ್ಶನ ಜನರಿಗಾಗಲೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News