×
Ad

ಉಡುಪಿ: ಇನ್ನು ನಿಮಿಷದಲ್ಲಿ ಪಹಣಿ ಪತ್ರ

Update: 2018-02-07 21:50 IST

ಉಡುಪಿ, ಫೆ.7: ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳುವ ಮಾದರಿಯಲ್ಲೆ ಸಾರ್ವಜನಿಕರು ಹಾಗೂ ರೈತರು ಇನ್ನು ಮುಂದೆ ಪಹಣಿ ಪತ್ರಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್‌ನಿಂದ ಸಾಲ ಪಡೆಯಲು ಬೆಳೆ ವಿಮೆ ಪಡೆಯಲು ಹಾಗೂ ಇನ್ನಿತರ ಸರಕಾರದ ಸೌಲ್ಯ ಪಡೆಯಲು ಅಗತ್ಯವಾದ ಪಹಣಿಗಾಗಿ ಸಾರ್ವಜನಿಕರು ಹಾಗೂ ರೈತರು ತಹಶೀಲ್ದಾರ್ ಕಚೇರಿ, ನಾಡ ಕಚೇರಿಗಳಲ್ಲಿ ಇಡೀ ದಿನ ಸರದಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಕ್ಷಣಾರ್ಧದಲ್ಲಿ ಪಹಣಿ ಪತ್ರವನ್ನು ದೂರಕಿಸುವ ಉದ್ದೇಶದಿಂದ ಸರಕಾರ ‘ಐ-ಆರ್‌ಟಿಸಿ’ ಎಂಬ ವಿಶೇಷ ತಂತ್ರಾಂಶವನ್ನು ಪರಿಚಯಿಸಿದೆ.

ಅದರಂತೆ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್‌ನೆಟ್ ಸಂಪರ್ಕ ಹೊಂದಿರುವವರು ಅಥವಾ ಸೈಬರ್ ಕೆಫೆ ಅಥವಾ ಎಲ್ಲೆಂದರಲ್ಲಿ ಯಾವುದೇ ಸಮಯದಲ್ಲಿ ಆನ್‌ಲೈನ್ ಮೂಲಕ ಪಹಣಿ ಪಡೆಯಬಹುದಾಗಿದ್ದು, ಇದಕ್ಕಾಗಿ -http:/landrecords.karnataka.gov.in  -ತಾಣಕ್ಕೆ ಭೇಟಿ ನೀಡಿ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಆಧಾರ್ ಸಂಖ್ಯೆ, ಜಿಲ್ಲೆ, ತಾಲೂಕು ಹಾಗೂ ಸರ್ವೆ ನಂಬರ್ ನಮೂದಿಸಿ ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಸಹಿತ ಲ್ಯವಿರುವ ಹಣ ಪಾವತಿಸುವ ಆಯ್ಕೆಗಳನ್ನು ಬಳಸಿ ಕೇವಲ 10 ರೂ. ಪಾವತಿಸಿ ನಿಮಿಷಗಳಲ್ಲಿ ಖಾಲಿ ಹಾಳೆಯಲ್ಲಿ ಮುದ್ರಣ ಮಾಡಿಕೊಂಡು ಪಹಣಿ ಪಡೆಯಬಹುದಾಗಿದೆ.

ಸಾರ್ವಜನಿಕರು ಹಾಗೂ ರೈತರು ಇದರ ಪ್ರಯೋಜನವನ್ನು ನೇರವಾಗಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News