ಕೆಪಿಸಿಸಿ ಕರಾವಳಿ ವಲಯ ಅಲ್ಪಸಂಖ್ಯಾತ ಘಟಕದ ಕಾರ್ಯಕಾರಿಣೆ ಸಭೆ
ಮಂಗಳೂರು, ಫೆ. 7: ಕರಾವಳಿ ವಲಯಕ್ಕೆ ಒಳಗೊಂಡ 5 ಜಿಲ್ಲೆಗಳಾದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಅನೇಕ ಚುನಾಯಿತ ಪ್ರತಿನಿಧಿಗಳ ಕರಾವಳಿ ವಲಯ ಅಲ್ಪಸಂಖ್ಯಾತರ ಘಟಕದ ಸಭೆಯು ಬುಧವಾರ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯ್ಯದ್ ಅಹ್ಮದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಅಲ್ಪಸಂಖ್ಯಾತರಿಗೆ ಸರಕಾರದಿಂದ ಒದಗಿರುವ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಮತ್ತು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರಾವಳಿ ವಲಯದ ಅಧ್ಯಕ್ಷ ಯು.ಬಿ.ಸಲೀಂ ಅವರು ಅಲ್ಪಸಂಖ್ಯಾತರಿಗೆ ಕೋಮುಶಕ್ತಿಗಳ ಉಪಟಳ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲವು ಸಂದರ್ಭಗಳಲ್ಲಿ ಆಗುವ ಅನ್ಯಾಯದ ವಿಷಯ ಪ್ರಸ್ತಾಪಿಸಿ ಮುಂದೆ ಇದಕ್ಕೆ ಕಡಿವಾಣ ಹಾಕಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಮೂಡದ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮಂಗಳೂರು ತಾಲೂಕು ಅಧ್ಯಕ್ಷ ಮುಹಮ್ಮದ್ ಮೋನು, ಗುರುನಾಮ್ ಸಿಂಗ್ ಲೋಯಾ, ಸಬಿತಾ ಮಿಸ್ಕೆತ್, ರಾಜ್ಯ ಸಮಿತಿಯ ಸದಸ್ಯ ಅತೀಕ್ ಅಹ್ಮದ್, ನೂರುದ್ದೀನ್ ಸಾಲ್ಮರ್, ಮೊಹಿದಿನ್ ಮೋನು, ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್.ಎಸ್. ಕರೀಂ, ಸಾಹುಲ್ ಹಮೀದ್, ಸುಹೆಲ್ ಕಂದಕ್, ಅಬ್ದುಲ್ ರವೂಫ್ ಇಸ್ಮಾಯೀಲ್ ಅತ್ರಾಡಿ, ಜಮ್‌ಶದ್ ನಿಸಾರ್, ಆರಿಫುಲ್ಲಾ, ಮೆಹಬೂಬ್ ಅಲಿ ಹಾಗೂ ವಲಯ ಸಮಿತಿಯ ಪದಾಧಿಕಾರಿಗಳಾದ ಹನೀಫ್ ಜೆ., ಹರ್‌ಬರ್ಟ್ ಡಿಸೋಜಾ, ಶುಕೂರ್ ಹಾಗೂ ಶಂಶುದ್ದೀನ್ ಉಪಸ್ಥಿತರಿದ್ದರು.