ಚಾಲನಾ ಪರವಾನಿಗೆಗೂ ಆಧಾರ್ ಜೋಡಣೆ ?

Update: 2018-02-07 16:39 GMT

ಹೊಸದಿಲ್ಲಿ, ಫೆ. 7: ಕಲ್ಯಾಣ ಕಾರ್ಯಕ್ರಮ ಹಾಗೂ ಹಣಕಾಸು ಸೇವೆಗಳಿಗೆ ಆಧಾರ್ ಜೋಡಣೆ ಮಾಡಿದ ಬಳಿಕ ಕೇಂದ್ರ ಸರಕಾರ ಚಾಲನಾ ಪರವಾನಿಗೆಯೊಂದಿಗೆ ಆಧಾರ್ ಜೋಡಣೆಯ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಸುಪ್ರಿಂ ಕೋರ್ಟ್‌ಗೆ ಬುಧವಾರ ತಿಳಿಸಲಾಗಿದೆ.

 ನಕಲಿ ಪರವಾನಿಗೆಗಳನ್ನು ನಾಶಪಡಿಸಲು ಹಾಗೂ ಎಲ್ಲ ರಾಜ್ಯಗಳಲ್ಲಿ ನೀಡಲಾದ ಪರವಾನಿಗೆಗಳನ್ನು ಜೋಡಿಸಲು ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ತಿಳಿಸಿದೆ.

12 ಅಂಕೆಗಳ ಆಧಾರ್ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಇನ್ನೊಂದು ಪೀಠಕ್ಕೆ ಸಲ್ಲಿಸಲಾಗಿರುವ ವರದಿ, ‘ಸಾರಥಿ-4’ ಎಂದು ಕರೆಯಲಾಗುವ ಸಾಫ್ಟ್‌ವೇರ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಸಿದ್ಧಪಡಿಸುತ್ತಿದೆ ಎಂದು ಹೇಳಿದೆ.

‘‘ಈ ಸಾಫ್ಟ್‌ವೇರ್ ನೈಜ ಸಮಯದ ಆಧಾರದಲ್ಲಿ ಎಲ್ಲ ರಾಜ್ಯಗಳನ್ನು ಒಳಗೊಳ್ಳುತ್ತದೆ. ಇದರಿಂದ ದೇಶದಲ್ಲಿ ಯಾರೊಬ್ಬರೂ ನಕಲಿ ಪರವಾನಿಗೆ ಪಡೆಯಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕೆ.ಎಸ್. ರಾಧಾಕೃಷ್ಣ ಅವರ ನೇತೃತ್ವದ ರಸ್ತೆ ಸುರಕ್ಷತೆಗಿರುವ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News