×
Ad

ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ ಅಸ್ತಿತ್ವಕ್ಕೆ

Update: 2018-02-07 22:18 IST

ಮಂಗಳೂರು, ಫೆ.7: ಸುರತ್ಕಲ್ ಹೋಬಳಿ ಮಟ್ಟದ ಮುಸ್ಲಿಂ ಜಮಾಅತ್ ಅಧ್ಯಕ್ಷರು ಹಾಗೂ ಸಾಮಾಜಿಕ, ಧಾರ್ಮಿಕ ನಾಯಕರನ್ನೊಳಗೊಂಡ ‘ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ’ ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾಯಿತು.

ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ಎಂಜೆಎಂ ಸಭಾಂಗಣದಲ್ಲಿ ನಡೆದ ಸುರತ್ಕಲ್ ಹೋಬಳಿ ಮಟ್ಟದ ಜಮಾಅತ್‌ಗಳ ಅಧ್ಯಕ್ಷರು, ಧಾರ್ಮಿಕ ಹಾಗೂ ಸಾಮಾಜಿಕ ನಾಯಕರನ್ನೊಳಗೊಂಡ ಸಭೆಯಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ನೂತನ ವೇದಿಕೆಯ ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಬದ್ರಿಯಾ ಕಾನ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮುಹಮ್ಮದ್ ಶರೀಫ್ ಮುಂಚೂರು, ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ಅದ್ದು, ಮುಹಮ್ಮದ್ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಐ.ಎಚ್.ಮೊಯ್ದಿನ್, ಖಜಾಂಚಿಯಾಗಿ ಮುಹಮ್ಮದ್ ತಮೀಮ್ ಅವರನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಉಮರ್ ಫಾರೂಕ್ ಅಡ್ವಕೇಟ್, ಅಬೂಬಕರ್ ಕನ್ನಡನಾಡು, ಅಬ್ದುಲ್ ಅಝೀಝ್, ಜಲೀಲ್ ಕೃಷ್ಣಾಪುರ, ಸರ್ಫರಾಝ್, ಅಶ್ರಫ್ ಸಫ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News