×
Ad

ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರಿಗೆ ಸರಣಿ ಗೆಲುವು

Update: 2018-02-07 22:27 IST

ಕಿಂಬರ್ಲಿ, ಫೆ.7:ಆರಂಭಿಕ ಅಟಗಾರ್ತಿ ಸ್ಮತಿ ಮಂದಾನ ಶತಕ ಮತ್ತು ಪೂನಮ್ ಯಾದವ್ ಪ್ರಹಾರದ ನೆರವಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 178 ರನ್‌ಗಳ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಭಾರತ ವಿಶ್ವಕಪ್ ಬಳಿಕ ಮತ್ತೊಮ್ಮೆ ಉತ್ತಮ ಸಾಧನೆ ಮಾಡಿದೆ.

  ಗೆಲುವಿಗೆ 302 ರನ್‌ಗಳ ಕಠಿಣ ಸವಾಲು ಪಡೆದ ದಕ್ಷಿಣ ಆಫ್ರಿಕದ ಮಹಿಳಾ ಕ್ರಿಕೆಟ್ ತಂಡ ಪೂನಮ್ ಯಾದವ್ (24ಕ್ಕೆ4 ) ದಾಳಿಗೆ ಸಿಲುಕಿ 30.5 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟಾಗಿದೆ.

ಸಂಕ್ಷಿಪ್ತ ಸ್ಕೋರ್ ವಿವರ

ಭಾರತದ ಮಹಿಳಾ ತಂಡ 50 ಓವರ್‌ಗಳಲ್ಲಿ 302/3(ಮಂಧಾನ 135; ಸುನೆ ಲೂಸ್31ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News