ಪುದು ಗ್ರಾಪಂ ಚುನಾವಣೆ: ಮೂರನೆ ದಿನ 16 ನಾಮಪತ್ರ ಸಲ್ಲಿಕೆ
Update: 2018-02-07 23:14 IST
ಫರಂಗಿಪೇಟೆ, ಪೆ. 7: ಪುದು ಗ್ರಾಮ ಪಂಚಾಯತ್ ಚುನಾವಣೆ ಫೆ 18ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಯ ಮೂರನೆ ದಿನವಾದ ಬುಧವಾರ 16 ನಾಮಪತ್ರ ಸಲ್ಲಿಕೆಯಾಗಿವೆ.
ಪುದುವಿನ 1ನೆ ವಾರ್ಡ್ ಕುಂಪನಮಜಲ್ ನಲ್ಲಿ ಕೈರುನ್ನೀಸ, ಮುಹಮ್ಮದ್ ಸಿರಾಜ್, ಅಬ್ದುಲ್ ಸಲಾಮ್ ಕೆ, ಮುಹಮ್ಮದ್ ಶರೀಫ್, ಚಂದಪ್ಪ, 2 ನೆ ವಾರ್ಡ್ ಅಮೆಮಾರ್ (ಕೆಳಗೆ) ಸಿದ್ದೀಕ್, ಮುಹಮ್ಮದ್ ಶಾಫಿ, 3 ನೆ ವಾರ್ಡ್ ಸುಲೈಮಾನ್, ಹಾಜಿರಾ, 4 ನೆ ವಾರ್ಡ್ ಅಬ್ದುಲ್ ಲತೀಫ್ ಪಂಡಿತ್, 5 ನೆ ವಾರ್ಡ್ ಅಶ್ರಫ್ ಸುಜೀರ್, ಜಮೀಲಾ, 6 ನೆ ವಾರ್ಡ್ ಮುಹಮ್ಮದ್ ಶರೀಫ್, ಅಬ್ಬಾಸ್, 7 ನೆ ವಾರ್ಡ್ ಅಬ್ದುಲ್ ಲತೀಫ್, 10 ನೆ ವಾರ್ಡ್ ಅಬ್ದುಲ್ ಲತೀಫ್ ಎಂಬವರು ನಾಮ ಪತ್ರ ಸಲ್ಲಿಸಿದ್ದಾರೆ. ನಾಮ ಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ ಎಂದು ಚುನಾವಣಾದಿಕಾರಿಗಳು ತಿಳಿಸಿದ್ದಾರೆ.