×
Ad

ಫೆ.9: ಪ್ರಚಾರ ಸಮ್ಮೇಳನ

Update: 2018-02-08 17:58 IST

ಮಂಗಳೂರು, ಫೆ.8: ಜಾಮಿಅಃ ಇರ್ಫಾನಿಯಾ ಅರಬಿಯಾ ಚಪ್ಪಾರಪಡವು ಇದರ 26ನೆ ವಾರ್ಷಿಕ ಹಾಗೂ 18ನೆ ಸನದುದಾನ ಸಮ್ಮೇಳನವು ಫೆ. 22, 23, 24, 25ರಂದು ಕೇರಳ ಕಣ್ಣೂರಿನ ಚಪ್ಪಾರಪಡವಿನ ಕಾಲೇಜು ಪರಿಸರದಲ್ಲಿ ನಡೆಯಲಿದ್ದು, ಅದರ ಪ್ರಚಾರ ಸಮ್ಮೇಳನವು ಫೆ. 9ರಂದು ಅಸರ್ ನಮಾಝ್ ಬಳಿಕ ನಗರದ ಕಂದುಕದ ಬದ್ರಿಯಾ ಜುಮಾ ಮಸೀದಿಯ ಮುಖ್ಯರಸ್ತೆಯಲ್ಲಿ ನಡೆಯಲಿದೆ.

ಅಪರಾಹ್ನ 3ಕ್ಕೆ ಕೇಂದ್ರ ಜುಮಾ ಮಸೀದಿ ಬಳಿಯ ಶೈಖುಲ್ ಮಸಾಯಿಕ್ ಮುಹಮ್ಮದ್ ಮೌಲ ಜಲಾಲ್ ಮಸ್ತಾನ ದರ್ಗಾ ಝಿಯಾರತ್ ನಡೆಯಲಿದೆ. ಪ್ರಚಾರ ಸಮ್ಮೇಳನದಲ್ಲಿ ಉಮರ್ ಫೈಝಿ ಇರ್ಫಾನಿ ಮುಖ್ಯಭಾಷಣ ಹಾಗೂ ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಪ್ರೊ. ಅನೀಸ್ ಕೌಸರಿ, ಕುಂಪನಮಜಲು ಖತೀಬ್ ಉಬೈದುಲ್ಲಾ ಅಝ್‌ಹರಿ ಪಾಂಡವರಕಲ್ಲು ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News