×
Ad

ತುಂಬೆ ವೆಂಟೆಡ್ ಡ್ಯಾಂ: ಏಳು ಮಂದಿ ಸಂತ್ರಸ್ತರಿಗೆ ಪರಿಹಾರ

Update: 2018-02-08 18:05 IST

ಮಂಗಳೂರು, ಫೆ.8: ಮಂಗಳೂರು ಮಹಾನಗರ ಪಾಲಿಕೆಯ ತುಂಬೆ ವೆಂಟೆಡ್‌ಡ್ಯಾಂನ ನೀರಿನ ಮಟ್ಟದ ಏರಿಕೆಯಿಂದ ಮುಳುಗಡೆಯಾದ 7 ಮಂದಿ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ಹೇಳಿದರು.

ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಮಂಗಳೂರು ನಗರಕ್ಕೆ ಕುಡಿ ಯುವ ನೀರಿನ ಸಮಸ್ಯೆಯಾಗದಂತೆ ಕಿಂಡಿ ಅಣೆಕಟ್ಟಿನಲ್ಲಿ 5.0 ಮೀ. ಎತ್ತರಕ್ಕೆ ನೀರನ್ನು ಸಂಗ್ರಹಿಸಲಾಗಿದ್ದು, 5.0 ಮೀ ನೀರು ನಿಲ್ಲಿಸಿದಾಗ 28 ಮಂದಿ ರೈತರ 20.53 ಎಕರೆ ಜಮೀನು ಮುಳುಗಡೆಯಾಗುತ್ತಿದೆ. ಈ ಬಗ್ಗೆ 7 ಕೋ.ರೂ. ಪರಿಹಾರಧನವನ್ನು ಬಿಡುಗಡೆ ಮಾಡಲಾಗಿದೆ. ಮುಳುಗಡೆಯಾದ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿ 7 ಮಂದಿ ರೈತರಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದರು.

ತುಂಬೆ ಡ್ಯಾಂನಿಂದ ನಗರ ಪಾಲಿಕೆ ವ್ಯಾಪ್ತಿಗೆ ಪ್ರತಿದಿನ ಎಷ್ಟು ನೀರಿನ ಆವಶ್ಯಕತೆ ಇದೆ ಮತ್ತು ನೀರಿನ ಸೋರುವಿಕೆಯನ್ನು ತಡೆಯಲು ನಗರ ಪಾಲಿಕೆ ಕೈಗೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಮನಪಾ ವ್ಯಾಪ್ತಿಗೆ ಪ್ರತಿ ದಿನ 120 ಎಂ.ಎಲ್.ಡಿ ನೀರು ಆವಶ್ಯಕತೆ ಇದೆ. ನೀರಿನ ಕೊಳವೆಗಳಲ್ಲಿ ಸೋರುವಿಕೆ ಉಂಟಾದಲ್ಲಿ ತುರ್ತಾಗಿ ದುರಸ್ಥಿಪಡಿಸಲು ಕ್ರಮವಹಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News