ಫೆ. 11: ಉಚಿತ ಮಧುಮೇಹ ತಪಾಸಣಾ ಶಿಬಿರ
ಮಂಗಳೂರು, ಫೆ. 8: ಲಯನ್ಸ್ ಮತ್ತು ಲಿಯೋಕ್ಲಬ್ ಕದ್ರಿ ಹಿಲ್ಸ್, ಮಂಗಳೂರು ಸಾವಯವ ಕೃಷಿಕ ಬಳಗ, ಮಂಗಳೂರು ಮತ್ತು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ, ವಲೆನ್ಸಿಯಾ ಇದರ ಜಂಟಿ ಆಶ್ರಯದಲ್ಲಿ ಫೆ.11ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಧುಮೇಹ ಜಾಗೃತಿ ಮಾಹಿತಿ ಶಿಬಿರ ಬಾಲಂಭಟ್ ಹಾಲ್, ಶರವು ದೇವಸ್ಥಾನದ ಬಳಿಯಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ನುರಿತ ವೈದ್ಯರಿಂದ ಉಚಿತ ಮಧುಮೇಹ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷೆ, ಮಧುಮೇಹಿಗಳಿಗೆ ಉಚಿತ ಆಹಾರ ಕ್ರಮದ ಮಾರ್ಗ ದರ್ಶನ, ರಕ್ತದಲ್ಲಿ ಗ್ಲುಕೋಸ್ ಮಟ್ಟದ ನಿಯಂತ್ರಣಕ್ಕೆ ಸಲಹೆ, ಉಚಿತವಾಗಿ ವೈದ್ಯರಿಂದ ಆರೋಗ್ಯ ತಪಾಸಣೆ, ಪ್ರತಿಷ್ಠಿತ ಆಯುರ್ವೇದ ಕಂಪನಿಯ ಉಚಿತ ಮಧುಮೇಹ ಔಷಧಿ ವಿತರಣೆ, ಮಧುಮೇಹಿಗಳಿಗೆ ವಿವಿಧ ತರಕಾರಿಗಳಿಂದ ತಯಾರಿಸಿದ ಸಲಾಡ್ ಹಾಗೂ ಆರೋಗ್ಯಕರ ಪಾನೀಯ ಮಾರಾಟ, ಅನುಭವಿ ಯೋಗ ಮತ್ತು ಮುದ್ರೆ ತಜ್ಞರಿಂದ ಡಯಾಬಿಟಿಸ್ ಮುದ್ರೆ, ಲಘುಮಂತ್ರ ಮುದ್ರೆ, ವರ್ಣ ಚಿಕಿತ್ಸೆ ತರಬೇತಿ ಮತ್ತು ಮಾಹಿತಿ. ಪಾರಂಪರಿಕ ಮಧುಮೇಹ ಔಷಧಿಗಳ ಪ್ರದರ್ಶನ ಮಾಹಿತಿ ಮತ್ತು ಮಾರಾಟ, ಡಯಾಬಿಟಿಸ್‌ನ ಬಗ್ಗೆ ವಿವಿಧ ಪುಸ್ತಕ ಮಾರಾಟ ಹಾಗೂ ಪೌಷ್ಟಿಕ ಆಹಾರಗಳ ಮಾಹಿತಿಯನ್ನು ಏರ್ಪಡಿಸಲಾಗಿದೆ. ಆಸಕ್ತರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.