ಕಾಸರಗೋಡು : ಲಾರಿ-ಬುಲೆಟ್ ಬೈಕ್ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Update: 2018-02-08 19:52 IST
ಕಾಸರಗೋಡು, ಫೆ. 8: ಲಾರಿ ಮತ್ತು ಬುಲೆಟ್ ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ನಡೆದಿದೆ.
ಮೃತರನ್ನು ಮೂಲತಃ ಕುಂದಾಪುರದ ಪ್ರಸ್ತುತ ಭೀಮನಡಿಯಲ್ಲಿ ವಾಸವಾಗಿರುವ ಎಂ ಪಿ ಲೂಕಚ್ಚನ್ ( 53) ಮತ್ತು ವಿಜಯನ್ ( 38) ಎಂದು ಗುರುತಿಸಲಾಗಿದೆ.
ಕುಂದಾಪುರದಿಂದ ಕಾಸರಗೋಡಿನ ಭೀಮನಡಿಗೆ ಮರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಇಬ್ಬರು ಸ್ನೇಹಿತರಾಗಿದ್ದು, ವಿಜಯನ್ ಭೀಮನಡಿಯಲ್ಲಿ ಹೋಟೆಲ್ ನೌಕರನಾಗಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಸರಗೋಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.