×
Ad

ಸೇನೆಯಲ್ಲಿ ಬಹುತ್ವ, ಜಾತ್ಯಾತೀತ ಸಮಾಜ

Update: 2018-02-08 21:15 IST

► ತನ್ನ 'ವಿಶೇಷ ಜಾತಿ, ಧರ್ಮ'ದ ಬಗ್ಗೆ ಈ ಅಧಿಕಾರಿ ಹೇಳಿದ್ದೇನು ?

 ಹೊಸದಿಲ್ಲಿ, ಫೆ. 8: ಸೇನೆಯಲ್ಲಿರುವ ಪ್ರತಿಯೊಬ್ಬರು ‘ಬಹುತ್ವ ಹಾಗೂ ಜಾತ್ಯತೀತ ಸಮಾಜ’ದಲ್ಲಿ ಜೀವಿಸುತ್ತಿದ್ದೇವೆ. ತಮ್ಮ ಜಾತಿ ಹಾಗೂ ಧರ್ಮವನ್ನು ಪರಿಗಣಿಸದೆ ‘ಒಂದೇ ಘಟಕದಂತೆ ವರ್ತಿಸುತ್ತೇವೆ’ ಎಂದು ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೌರಭ್ ಸಿಂಗ್ ಶೇಖಾವತ್ ಹೇಳಿದ್ದಾರೆ. “ನಾನು ಸೇನೆಗೆ ನಿಯೋಜನೆಯಾದಾಗ ಹಾಗೂ ನಾನು ವಿಶೇಷ ಪಡೆಗೆ ಸೇರ್ಪಡೆಯಾದಾಗ ನನ್ನ ಎಸ್‌ಸಿಒ ಕೇಳಿದರು, ‘ನಿನ್ನ ಧರ್ಮ ಯಾವುದು?, ನಿನ್ನ ಜಾತಿ ಯಾವುದು ?’ ನಾನು ಹೇಳಿದೆ ‘ಹಿಂದೂ ರಜಪೂತ’. ಅವರು ಹೇಳಿದರು, ಮೂರ್ಖ ಕೆಸರು ನೀರಲ್ಲಿ ಮಳುಗು ಹಾಕು !. ನಾನು ಕೆಸರು ನೀರಲ್ಲಿ ಮುಳುಗು ಹಾಕಿದೆ. ಅನಂತರ ನನಗೆ ಗೊತ್ತಾಯಿತು ನಾನು ಹೇಳಿದ್ದು ತಪ್ಪು ಎಂದು”… ಟ್ವಿಟ್ಟರ್‌ನಲ್ಲಿ ಮಾಜಿ ಸೇನಾಧಿಕಾರಿ ರಘುರಾಮನ್‌ಗೆ ಹಂಚಿಕೊಂಡ ವೀಡಿಯೊ ದೃಶ್ಯದಲ್ಲಿ ಕರ್ನಲ್ ಶೇಕಾವತ್ ಹೀಗೆ ಹೇಳಿದ್ದಾರೆ. ಈ ವೀಡಿಯೊ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂದರ್ಶನದಲ್ಲಿ ಏನಿರಬಹುದು? ಇದೇ ಪ್ರಶ್ನೆಯನ್ನು ಕೇಳಿದರು. ನನ್ನ ಉತ್ತರಕ್ಕೆ ಅವರ ಪ್ರತಿಕ್ರಿಯೆ ಭಿನ್ನವಾಗಿತ್ತು.

 ಅನಂತರ ಅವರು ಅದೇ ಪ್ರಶ್ನೆಯನ್ನು ಕೇಳಿದರು. “ಸರ್, ನನ್ನ ಧರ್ಮ ವಿಶೇಷ ಪಡೆ ಹಾಗೂ ನನ್ನ ಜಾತಿ ವಿಶೇಷ ಪಡೆ” ಎಂದು ಹೇಳಿದೆ. ಅನಂತರ ಅವರು, ಈಗ “ನೀನು ಅಧಿಕಾರಿ. ಆದುದರಿಂದ ನಿನ್ನ ಧರ್ಮ ನಿನ್ನ ಜೊತೆಗಿರುವವರ (ಯೋಧ) ಧರ್ಮವಾಗಿದೆ” ಎಂದು ಹೇಳಿದ್ದರು.

ದೇಶದಲ್ಲಿ ನೀವು ಈ ಮಾದರಿ ಅನ್ವಯಿಸಿದರೆ, ಹೆಚ್ಚಿನ ಸಮಸ್ಯೆ ಪರಿಹಾರವಾಗಲಿದೆ. ಎಲ್ಲ ಧರ್ಮಗಳು ಇಲ್ಲಿವೆ. ಎಲ್ಲ ವರ್ಗ ಹಾಗೂ ಕುಲಗಳು ಇಲ್ಲಿ ಒಟ್ಟಾಗಿವೆ. ಈಗಲೂ ಅವು ಒಂದು ಘಟಕ ಎಂದು ಶೇಖಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News