×
Ad

ಜಿಂಜರ್ ಗಾರ್ಲಿಕ್‌ನಲ್ಲಿ ‘ಬಿರ್ಯಾನಿ ಕಬಾಬ್ ಮೇಳ’

Update: 2018-02-08 21:59 IST

ಮಣಿಪಾಲ, ಫೆ.8: ಮಣಿಪಾಲದ ಡಿಸಿ ಕಚೇರಿ ರಸ್ತೆಯಲ್ಲಿರುವ ತಲ್ಲೂರ್ಸ್ ಸರಾ ಇಂಟರ್‌ನೇಷನಲ್ ಹೊಟೇಲಿನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ‘ಜಿಂಜರ್ಸ್‌ ಗಾರ್ಲಿಕ್’ ರೆಸ್ಟೋರೆಂಟ್‌ನಲ್ಲಿ ಇಂದಿನಿಂದ ಫೆ.19ರವರೆಗೆ ‘ಬಿರ್ಯಾನಿ ಕಬಾಬ್ ಮೇಳ’ ನಡೆಯಲಿದೆ ಎಂದು ಹೊಟೇಲಿನ ಪ್ರಧಾನ ವ್ಯವಸ್ಥಾಪಕ ನಿತಿನ್ ಲೋಬೊ ಹೇಳಿದ್ದಾರೆ.

ಹೊಟೇಲಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಹೊಟೇಲ್ ಉದ್ಯಮದಲ್ಲಿ ಕಳೆದ ಎರಡು ದಶಕಗಳಿಂದ ಹೆಸರು ವಾಸಿಯಾದ ತಲ್ಲೂರು ಟ್ರೇಡರ್ಸ್‌ನ ಹೊಟೇಲ್ ತಾಂಬೂಲಮ್‌ನ ಹೊಸ ಶಾಖೆ ಇದಾಗಿದೆ. ಇದು ವಿನೂತನ ಮಾಂಸಾಹಾರಿ ಹಾಗೂ ಕರಾವಳಿ ಮೀನಿನ ಖಾದ್ಯಗಳಿಗೆ ಹೆಸರುವಾಸಿಯಾಗಿದೆ ಎಂದವರು ತಿಳಿಸಿದರು.

ಬಿರ್ಯಾನಿ-ಕಬಾಬ್ ಮೇಳದಲ್ಲಿ ವೈವಿಧ್ಯಮಯ ಬಿರ್ಯಾನಿ ಹಾಗೂ ಕಬಾಬ್‌ಗಳ ರುಚಿಕರ ಪಾಕವೈವಿಧ್ಯ, ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯ ವಿರಲಿದೆ. ತಲ್ಲೂರ್ಸ್‌ ತಾಂಬೂಲಮ್‌ನ ವಿಶಿಷ್ಟ ಐಟಂಗಳು ಲಭ್ಯವಿರುತ್ತದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಂಜರ್ ಗಾರ್ಲಿಕ್‌ನ ಫ್ರೆಂಟ್ ಮ್ಯಾನೇಜರ್ ಹಿರ್ಮನ್ ಮೆಂಡೋನ್ಸಾ, ಮುಖ್ಯ ಬಾಣಸಿಗ ರಾಜೀವ್ ಹಾಗೂ ಜೂನಿಯಸ್ ಪಿರೇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News