ಫೆ.11: ಸುರತ್ಕಲ್‌ನಲ್ಲಿ ತುಳುನಾಡ ಬಿರುವೆರ್ ಉದ್ಘಾಟನೆ
Update: 2018-02-09 20:13 IST
ಮಂಗಳೂರು, ಫೆ.9: ಫ್ರೆಂಡ್ಸ್ ಸುರತ್ಕಲ್ ಇದರ ಆಶ್ರಯದಲ್ಲಿ ‘ತುಳುನಾಡ ಬಿರುವೆರ್’ ಸ್ಥಾಪಿಸಲಾಗಿದ್ದು, ಫೆ.11ರಂದು ಕುಳಾಯಿ ಮಹಿಳಾ ಮಂಡಲದ ಬಳಿ ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಪ್ರಮುಖ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಜಾತಿ,ಮತ ಭೇದ ಮರೆತು ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಕಾರ್ಕಳದ ಹೊಸ್ಮಾರು ಮಠದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನದೊಂದಿಗೆ ಸಂಘ ಉದ್ಘಾಟನೆಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಲೋಕೇಶ್ ಕೋಡಿಕೆರೆ, ವಿಶ್ವನಾಥ ಕೋಡಿಕೆರೆ ಮತ್ತಿತರರು ಉಪಸ್ಥಿತರಿದ್ದರು.