×
Ad

ಪತ್ರಿಕಾ ಸ್ವಾತಂತ್ರದಲ್ಲಿ ಭಾರತಕ್ಕೆ 136ನೆ ಸ್ಥಾನ: ವಿನೋದ್ ಜೋಸ್

Update: 2018-02-09 21:09 IST

ಮಣಿಪಾಲ, ಫೆ.9: ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ಅದು ಇಲ್ಲವಾಗಿದೆ. ಭಾರತ ಪತ್ರಿಕಾ ಸ್ವಾತಂತ್ರದಲ್ಲಿ 136ನೆ ಸ್ಥಾನದಲ್ಲಿದೆ. ಅದೇ ರೀತಿ ಕರ್ತವ್ಯದ ವೇಳೆ ಮೃತಪಡುವ ಪತ್ರಕರ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದುದರಿಂದ ಉತ್ತಮ ಗುಣಮಟ್ಟದ ಪತ್ರಿಕೋ ದ್ಯಮ  ಇಂದಿನ ಅಗತ್ಯವಾಗಿದೆ ಎಂದು ಪತ್ರಕರ್ತ ವಿನೋದ್ ಕೆ.ಜೋಸ್ ಹೇಳಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆ್ ಕಮ್ಯುನಿಕೇಶನ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರ್ಟಿಕಲ್ 19 ಸಂವಹನ ಹಬ್ಬದ ಎರಡನೆ ದಿನದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಕೆಲ ಮಾಧ್ಯಮಗಳಲ್ಲಿ ಮುದ್ರಿತವಾಗದ ಅನೇಕ ಗಂಭೀರ ವಿಚಾರಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಳ್ಳುತ್ತಿದೆ. ನ್ಯಾಯಾಧೀಶ ಲೋಯಾ ನಿಗೂಢ ಸಾವಿನ ಪ್ರಕರಣ ಹೆಚ್ಚಿನ ಪತ್ರಿಕೆಯಲ್ಲಿ ಮಹತ್ವ ಪಡೆದಿರಲಿಲ್ಲ. ಆದರೆ ಈ ವಿಚಾರ ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್ ಹಾಗೂ ಇಂಗ್ಲಿಷ್, ಹಿಂದಿ ಪತ್ರಿಕೆಯನ್ನು ಹೊರತು ಪಡಿಸಿ ಭಾಷಾ ಪತ್ರಿಕೆಗಳ ಮೂಲಕ ಹೊರ ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲೂ ಭಾಷಾ ಪತ್ರಿಕೆಗಳ ಪಾತ್ರ ಮಹತ್ತರ ವಾಗಿತ್ತು ಎಂದರು.

ಪ್ರತಿಯೊಬ್ಬರಿಗೂ ಸಮಾನತೆ ನೀಡಿರುವ ಭಾರತದಲ್ಲಿ ಜಾತಿ, ಧರ್ಮ, ಆಚಾರಕ್ಕೆ ಸಂಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸ್ಕೂಲ್ ಆ್ ಕಮ್ಯುನಿಕೇಶನ್‌ನ ನಿರ್ದೇಶಕಿ ಡಾ.ಪದ್ಮರಾಣಿ, ಉಪನ್ಯಾಸಕಿ ಶ್ರುತಿ ಶೆಟ್ಟಿ, ವಿದ್ಯಾರ್ಥಿಗಳಾದ ಸೌಮ್ಯಜಿತ್ ಸಹಾ, ಮುಕುಂದ್ ನಾಯಕ್ ಉಪಸ್ಥಿತರಿದ್ದರು. ಸುಜಾಲಾ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News