×
Ad

ಮಂಗಳೂರು: ಹೊಸ ‘ಇಲೈಟ್ ಐ20’ ಕಾರು ಬಿಡುಗಡೆ

Update: 2018-02-09 21:35 IST

ಮಂಗಳೂರು, ಫೆ. 9: ಕಾರು ಉತ್ಪಾದನಾ ಕ್ಷೇತ್ರದಲ್ಲಿ ದೇಶದಲ್ಲಿ ಎರಡನೆ ಸ್ಥಾನದಲ್ಲಿರುವ ಹುಂಡಾ ಕಂಪೆನಿಯ 2018ರ ನೂತನ ‘ಇಲೈಟ್ ಐ20’ ಕಾರು ನಗರದ ಕುಂಟಿಕಾನದಲ್ಲಿರುವ ಹುಂಡಾ ಕಾರಿನ ಅಧಿಕೃತ ಡೀಲರ್ ಆಗಿರುವ ಅದ್ವೈತ್ ಹುಂಡಾ ಶೋ ರೂಂನಲ್ಲಿ ಶುಕ್ರವಾರ ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಕನ್ನಡ ಚಲನಚಿತ್ರ ನಟಿ ಐಶ್ವರ್ಯ ನಾಗ್ ನೂತನ ಕಾರನ್ನು ಮಾರುಕಟ್ಟಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ಮೂಲದವಳಾಗಿರುವ ನಾನು ಮಂಗಳೂರಿನಲ್ಲಿ ಓಡಾಡಲು ಕಾರನ್ನು ಖರೀದಿಸಲು ಯೋಚಿಸಿದ್ದು, ಇಲೈಟ್ ಐ20 ಸೂಕ್ತ ಆಯ್ಕೆ ಎಂದು ಭಾವಿಸುತ್ತೇನೆ ಎಂದರು. ಹೆಚ್ಚು ಬಾಳಿಕೆ ಬರುವಂತಹ ಹುಂಡೈ ಕಂಪೆನಿಯ ಕಾರನ್ನು ಮಂಗಳೂರಿಗೆ ಬಂದು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದು ಖುಷಿ ತಂದಿದೆ. ಹೆಚ್ಚಿನ ವರ್ಣಗಳಲ್ಲಿ ಕಾರು ಲಭ್ಯವಾಗಿದೆ ಎಂದರು.

ಐಶ್ವರ್ಯನಾಗ್ ಅವರು ನೂತನ ಐ20ಯ ಕೀಯನ್ನು ಪ್ರಥಮ ಗ್ರಾಹಕರಾದ ಫರಾಹತ್ ಬಾನು ಅವರ ಪರವಾಗಿ ಶೇಝಾನ್ ಅವರಿಗೆ ಹಸ್ತಾಂತರಿಸಿದರು. ಅದ್ವೈತ್ ಹುಂಡಾ ಶೋ ರೂಂನ ಸೇಲ್ಸ್ ಮ್ಯಾನೇಜರ್ ಮೀನಾ ರೇಗೋ ಸ್ವಾಗತಿಸಿದರು. ಶೋರೂಂನ ಮ್ಯಾನೇಜರ್ ರಾಜೇಶ್ ಉಳ್ಳಾಲ್ ವಂದಿಸಿದರು. ಪ್ರಸಿಲ್ಲಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಸೇಲ್ಸ್ ಮ್ಯಾನೇಜರ್ ಹರ್ಷರಾಜ್, ಅಕೌಂಟ್ಸ್ ಮ್ಯಾನೇಜರ್ ಸುಧಾಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News