ಕೋಮು, ಧಾರ್ಮಿಕ ಭಾವನೆಗೆ ಪ್ರಚೋದನೆ: ಶಾಸಕ ಸುನೀಲ್ ಕುಮಾರ್‌ಗೆ ಷರತ್ತು ಬದ್ಧ ಜಾಮೀನು
Update: 2018-02-09 21:43 IST
ಮಂಗಳೂರು, ಫೆ. 9: ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಮಂಗಳೂರು 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಇನ್ನು ಮುಂದೆ ಕೋಮು ಹಾಗೂ ಧಾರ್ಮಿಕ ಭಾವನೆ ಪ್ರಚೋದಿಸುವ ಭಾಷಣ ಮಾಡದಂತೆ ಷರತ್ತು ವಿಧಿಸಿ ನ್ಯಾಯಾಲಯವು ಈ ಜಾಮೀನು ಮಂಜೂರು ಮಾಡಿದೆ.
ಜ. 23ರಂದು ಬಂಟ್ವಾಳದಲ್ಲಿ ‘ಬಿಜೆಪಿ ನಡಿಗೆ ಗ್ರಾಮದ ಕಡೆಗೆ’ ಪಾದಯಾತ್ರೆಯ 9ನೆ ದಿನದ ಸಭಾ ಕಾರ್ಯಕ್ರಮದಲ್ಲಿ ‘‘ಈ ಚುನಾವಣೆ ರಾಜೇಶ್ ನಾಯಕ್, ರಮಾನಾಥ ರೈ ನಡುವಿನ ಚುನಾವಣೆಯಲ್ಲ, ಅಲ್ಲಾ ಮತ್ತು ರಾಮ ನಡುವಿನ ಚುನಾವಣೆ. ನೀವು ಅಲ್ಲಾನನ್ನು ಪ್ರೀತಿಸುವವರಿಗೆ ಅಥವಾ ರಾಮನನ್ನು ಪ್ರೀತಿಸುವವರಿಗೆ ಮತ ನೀಡುತ್ತೀರೋ ಎಂದ ನಿರ್ಧರಿಸಿ’’ ಎಂದು ಸುನಿಲ್ ಕುಮಾರ್ ಹೇಳಿದ್ದರು.
ಸುನೀಲ್ ಕುಮಾರ್‌ರ ಭಾಷಣವು ಧಾರ್ಮಿಕ ಭಾವನೆ ಪ್ರಚೋದನೆ ಎಂದು ಕಾಂಗ್ರೆಸ್ ಕಾರ್ಯಕರ್ತ ಪ್ರಶಾಂತ ಕುಲಾಲ್ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.