×
Ad

ಫೆ.11 ರಂದು ಮುರ್ಡೇಶ್ವರದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Update: 2018-02-09 21:53 IST

 ಭಟ್ಕಳ, ಫೆ. 9: ಸಿ.ಡಿ.ಟಿ.ಪಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಲಯನ್ಸ್ ಕ್ಲಬ್ ಮುರ್ಡೇಶ್ವರ ಹ್ಯೂಮನ್ ವೆಲ್‌ಫೇರ್ ಟ್ರಸ್ಟ್ ಹಾಗೂ ಮುಸ್ಲಿಂ ಎಜುಕೇಶನ್ ಸೊಸೈಟಿ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆ.ಎಂ.ಸಿ. ದಂತ ಮಹಾವಿದ್ಯಾಲಯದ ತಜ್ಞ ವೈದ್ಯರಿಂದ  ಫೆ.11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ನ್ಯಾಶನಲ್ ಹೈಸ್ಕೂಲ್ ಮುರ್ಡೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶಿಬಿರದಲ್ಲಿ ಹಲ್ಲುಗಳ ಸ್ವಚ್ಚಗೊಳಿಸುವಿಕೆ, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬುವಿಕೆ, ಅನಾರೋಗ್ಯಕರ ಹಲ್ಲುಗಳನ್ನು ಕೀಳುವುದು ಮತ್ತು ಮಕ್ಕಳಿಗೆ ವಿಶೇಷ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದರ, ಜೊತೆಗೆ ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಹಾಗೂ ಸಲಹೆ ನೀಡಲಾಗುವುದು. ಈ ಶಿಬಿರದಲ್ಲಿ ಭಾಗವಹಿಸುವವರು ಖಾಲಿ ಹೊಟ್ಟೆಯಲ್ಲಿ ಬರಬಾರದು, 15 ವರ್ಷದ ಒಳಗಿನ ಮಕ್ಕಳು ಪಾಲಕರೊಂದಿಗೆ ಬರಬೇಕು ಹಾಗೂ ಖಾಯಿಲೆ ಇಂದ ಬಳಲುವವರು ತಪಾಸಣೆ ಗೈದ ವೈದೈರ ಸಲಹೆ ಚೀಟಿಯನ್ನು ತಮ್ಮೊಂದಿಗೆ ತರಬೇಕು.

ಶಿಬಿರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ , ಚಿಕಿತ್ಸೆಯ ಲಾಭ ಪಡೆದುಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮುರ್ಡೇಶ್ವರದ ಸಮುದಾಯಅಭಿವೃದ್ಧಿ ಯೋಜನೆಯ ಸಂಯೋಜನಾಧಿಕಾರಿ ಕೆ. ಮರಿಸ್ವಾಮಿ , ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ ,ಹ್ಯೂಮನ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಡಾ. ಅಮೀನುದ್ದೀನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News