ಖಾಲಿದಾ ಪಕ್ಷದ ಉಸ್ತುವಾರಿ ಮುಖ್ಯಸ್ಥನಾಗಿ ಪುತ್ರ

Update: 2018-02-09 16:41 GMT

ಢಾಕಾ, ಫೆ. 9: ಬಾಂಗ್ಲಾದೇಶದ ಪ್ರಧಾನ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿ (ಬಿಎನ್‌ಪಿ)ಯು ಖಾಲಿದಾ ಝಿಯಾರ ದೇಶಭ್ರಷ್ಟ ಪುತ್ರನನ್ನು ತನ್ನ ಉಸ್ತುವಾರಿ ಮುಖ್ಯಸ್ಥನಾಗಿ ಶುಕ್ರವಾರ ನೇಮಿಸಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯವೊಂದು ಖಾಲಿದಾ ಝಿಯಾರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಅನಾಥಾಶ್ರಮಕ್ಕೆ ನೀಡಬೇಕಾಗಿದ್ದ 2.52 ಲಕ್ಷ ಡಾಲರ್ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಖಾಲಿದಾ ಮೇಲಿದೆ.

ಇದೇ ಪ್ರಕರಣದಲ್ಲಿ ಅವರ ಮಗ ತಾರಿಕ್ ರಹಮಾನ್ ಕೂಡಾ ಆರೋಪಿಯಾಗಿದ್ದಾರೆ. ಆದರೆ, ಅವರು ಲಂಡನ್‌ನಲ್ಲಿ ಇರುವುದರಿಂದ ಶಿಕ್ಷೆಯಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News