ಭಟ್ಕಳ: ಫೆ.11ರಂದು ಸರ್ ಸೈಯದ್ ಆಹ್ಮದ್ ಖಾನ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ, ಮುಷಾಯಿರಾ
ಭಟ್ಕಳ, ಫೆ. 9: ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪಕ ಶೈಕ್ಷಣಿಕ ಮಾರ್ಗದರ್ಶಕ ಸರ್ ಸೈಯದ್ ಆಹ್ಮದ್ ಖಾನ್ ರ 200ನೇ ಸಂಭ್ರ ಮಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಉರ್ದು ಅಕಾಡಮಿ, ಅಂಜುಮನ್ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಫೆ.11 ರಂದು ಬೆಳಗ್ಗೆ 9.30ಗಂಟೆಗೆ ಸರ್ ಸೈಯದ್ ರ ಸಾಹಿತ್ಯಿಕ ಮತ್ತು ಶೈಕ್ಷಣಿಕ ಸೇವೆ ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ಸೆಮಿನಾರ್ ಸಂಚಾಲಕ ಪ್ರೋ.ಅಬ್ದುಲ್ ರವೂಫ್ ಸವಣೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡಮಿಯ ಅಧ್ಯಕ್ಷ ಡಾ.ಸೈಯದ್ ಅಬ್ದುಲ್ ಕಾದಿರ್ ಸರಗಿರೋ ಉದ್ಘಾಟಿಸುತ್ತಿದ್ದು ಪಾಟ್ನ(ಬಿಹಾರ್)ವಿ.ವಿ ಉರ್ದು ವಿಭಾಗದ ಮುಖ್ಯಸ್ಥ ಡಾ.ಜಾವಿದ್ ಪ್ರಮುಖ ಉಪನ್ಯಾಸವನ್ನು ನೀಡಲಿರುವುದು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸೈಯದ ಅಬ್ದುಲ್ ರಹ್ಮಾನ್ ಬಾತಿನ್ ವಹಿಸುವರು.
ಕೇರಳದ ಕಾಳಿ ಸಂಸ್ಕೃತ ವಿ.ವಿ. ಕೃಷ್ಣ ಕ.ನಕುಲ್ ಸೇರಿಂದತೆ ಮುಂಬೈ, ಕಲಬುರ್ಗಿ, ಬೆಂಗಳೂರು ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ರಾತ್ರಿ 9ಗಂಟೆಗೆ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಮೈದಾನದಲ್ಲಿ ಉರ್ದು ಮುಷಾಯಿರಾ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಉರ್ದು ಕವಿ ರಿಯಾಝ್ ಆಹ್ಮದ್ ಖುಮಾರ್ ನಿರೂಪಣೆಯನ್ನು ಮಾಡಲಿದ್ದಾರೆ. ಮುಷಾಯಿರಾದಲ್ಲಿ ರಾಜಸ್ಥಾನದ ಕವಿ ಯೂಸೂಫ್ ರಾರ್, ಸಿರಾಜ್ ಸೋಲಾಪುರಿ, ಅಸ್ಲಂ ಬನಾರಸಿ ಸೇರಿದಂತೆ ಸ್ಥಳೀಯ ಕವಿಗಳು ಭಾಗವಹಿಸಲಿದ್ದಾರೆ.